ಕನ್ನಡ ವಾರ್ತೆಗಳು

ಗಾಂಜಾ ಮಾರಾಟ ಯತ್ನ : ಅಟೋ ರಿಕ್ಷಾ ಮಾಲಿಕನ ಬಂಧನ

Pinterest LinkedIn Tumblr

excise_raid_ganja_1

ಮಂಗಳೂರು,ಫೆ.15 : ನಗರದ ದಂಬೆಲ್ ಎಂಬಲ್ಲಿ ಗುರುಪುರ – ಬಂಗ್ರಕೂಳೂರನ್ನು ಸಂಪರ್ಕಿಸುವ ಕಿರು ಸೇತುವೆಯ ನಮೀಪ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ನಿಖರ ಮಾಹಿತಿಯ ಮೇರೆಗೆ ಮಂಗಳೂರು ವಿಭಾಗದ ಅಬಕಾರಿಗಳ ಅಧಿಕಾರಿಗಳ ದಾಳಿ ನಡೆಸಿ ಗಾಂಜಾವನ್ನು ವಶ ಪಡಿಸಿಕೊಂಡ ಘಟನೆ ನಡೆದಿದೆ.

excise_raid_ganja_3 excise_raid_ganja_2

ಘಟನೆ ವಿವರ:
ಸೂರಜ್ ಯಾನೆ ಸೂರಿ ಇವರು ಬಜಾಜ್ ಆಟೋ ರಿಕ್ಷಾ ನಂಬ್ರ : ಕೆ ಎ 19 ಎಬಿ 0973 ರಲ್ಲಿ ಅಕ್ರಮವಾಗಿ 450 ಗ್ರಾಂ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಅಯುಕ್ತರಾದ ರಾಜೇಂದ್ರ ಪ್ರಸಾದ್ ರವರ ನಿರ್ದೇಶನದಂತೆ ದ ಕ ಜಿಲ್ಲಾ ಡೆಪ್ಯುಟಿ ಕಮೀಷನರ್ ಆಫ್ ಎಕ್ಯ್ಸೆಜ್ ನ ಎಲ್.ಎ ಮಂಜುನಾಥ್ ಅವರ ಮಾರ್ಗಸೂಚಿಯಂತೆ ಅಬಕಾರಿ ಇನ್ಸ್‌ಪೆಕ್ಟರ್ ರಾದ ಶ್ರೀಮತಿ ಸುನೀತಾ ಇವರು ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದ ಸಂಧರ್ಭ ವಾಹನ ಚಾಲಕ ಸೂರಜ್ ಯಾನೆ ಸೂರಿ ಪರಾರಿಯಾಗಿದ್ದು, ವಾಹನದ ಮಾಲಕರಾದ ಕುಪ್ಪೆ ಪದವು ,ಬಲ್ಲಾಜೆ ಹೌಸ್ ರಘುರಾಮ್ ಅವರು ಬಂಧಿಲಾಗಿದ್ದು ಹೆಚ್ಚಿನ ವಿವರಣೆ ನಡೆಸಲಾಗುತ್ತಿದೆ.

ಹೆಚ್ಚಿನ ವಿವರ ನಿರೀಕ್ಷಿಸಿ….

 

Write A Comment