ಕರ್ನಾಟಕ

ಮಾರ್ಚ್ ೪ಕ್ಕೆ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಬಿಡುಗಡೆ

Pinterest LinkedIn Tumblr

Simpallag

ಬೆಂಗಳೂರು: ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಬಿಡುಗಡೆಯಾದ ಮೂರು ವರ್ಷದ ನಂತರ ಈಗ ಮಾರ್ಚ್ ೪ಕ್ಕೆ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ.

ಬಿಡುಗಡೆಯ ತವಕದಲ್ಲಿರುವ ನಿರ್ದೇಶಕ ಸುನಿ “ಪ್ರಯೋಗಾತ್ಮಕ ಸಿನೆಮಾದ ಮುಂದುವರೆದ ಭಾಗದ ಬಿಡುಗಡೆ ದಿನಾಂಕ ಈ ಸಜ್ಜಾಗಿದೆ. ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’, ಸಿನೆಮಾ ನಿರ್ಮಾಣದ ಆರ್ಥಿಕತೆಯನ್ನೇ ಬದಲಿಸಿತ್ತು. ಆ ದೃಷ್ಟಿಯಿಂದ ಅದನ್ನು ಮರುಕಳಿಸಿದ್ದರೂ, ಸ್ಕ್ರಿಪ್ಟ್, ತಾರಾ ಗಣದ ಆಯ್ಕೆ ದೃಷ್ಟಿಯಿಂದ ಹೊಸ ಸಿನೆಮಾ ಸಂಪೂರ್ಣ ಬದಲಾಗಿದೆ” ಎನ್ನುತ್ತಾರೆ.

“ಹಿಂದಿನ ಸಿನೆಮಾ ಬಿಡುಗಡೆಯಾದ ವಾರದಲ್ಲೇ ಈ ಸಿನೆಮಾ ಬಿಡುಗಡೆಯಾಗುತ್ತಿದೆ ಹಾಗೆಯೇ ಹಿಂದಿನ ಸಿನೆಮಾದ ತಾಜಾತನವನ್ನು ಕೂಡ ಇದು ಉಳಿಸಿಕೊಂಡಿದೆ. ಆ ಸಿನೆಮಾದ ಜೊತೆಗೆ ಇರುವ ಸಂಬಂಧವೆಂದರೆ ಇಡೀ ಸಿನೆಮಾ ಎರಡು ಮುಖ್ಯ ಪಾತ್ರಗಳ ನಡುವೆಯೇ ಸುತ್ತುತ್ತದೆ. ಈ ಸಿನೆಮಾ ಕೂಡ ವಿಶಿಷ್ಟ ಕ್ಲೈಮ್ಯಾಕ್ಸ್ ಹೊಂದಿದ್ದು, ತಾಂತ್ರಿಕವಾಗಿ ಅತ್ಯದ್ಭುತವಾಗಿ ಮೂಡಿ ಬಂದಿದ್ದು, ಸಂಭಾಷಣೆಯಲ್ಲಿ ಕೂಡ ಛಾಪು ಮೂಡಿಸುತ್ತದೆ” ಎನ್ನುತ್ತಾರೆ ಸುನಿ.

ಫೆಬ್ರವರಿ ೧೮ ರಂದು ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರವೀಣ್ ಮತ್ತು ಮೇಘನಾ ಗಾವೋಂಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

Write A Comment