ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಚಕ್ರವ್ಯೂಹ’ ಸಿನೆಮಾದ ‘ಗೆಳೆಯ ಗೆಳೆಯಾ ಗೆಲುವು ನಮ್ಮದೆಯ’ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಯಂತೆ. ತೆಲುಗು ನಟ ಜೂನಿಯರ್ ಎನ್ ಟಿ ಆರ್ ಹಾಡಿರುವ ಈ ಹಾಡಿನ ಮೊದಲ ಆವೃತ್ತಿ ಇದಾಗಿದ್ದು, ಅದು ಹೇಗೋ ಸೋರಿಕೆಯಾಗಿದೆ ಎಂದಿದ್ದಾರೆ ನಿರ್ಮಾಪಕ.
ಈ ಹಾಡು ಇನ್ನೂ ಅಂತಿವಾಗಿ ರೆಕಾರ್ಡ್ ಆಗಿಲ್ಲವಾದರು, ಈ ಆವೃತ್ತಿಯಲ್ಲೇ ಜನರ ಮಧ್ಯೆ ಅತಿ ಹೆಚ್ಚು ಜನಪ್ರಿಯವಾಗಿದೆಯಂತೆ.
ಈ ಹಿಂದೆ ‘ಜಾಕಿ’ ಸಿನೆಮಾದಲ್ಲೂ ಕೂಡ ಹೀಗಾಗಿತ್ತು ಮತ್ತು ಜನ ಅವುಗಳೇ ಅಂತಿಮ ಹಾಡುಗಳೆಂದು ಸಂಭ್ರಮಿಸಿದ್ದರು. ‘ಚಕ್ರವ್ಯೂಹದ’ ಈ ಹಾಡಿನ ಸಾಹಿತ್ಯ ರಚನೆ ಮಾಡಿರುವುದು ಚಂದನ್ ಶೆಟ್ಟಿ. ಚಂದನ್ ಶೆಟ್ಟಿ ಕನ್ನಡ ಮತ್ತು ಇಂಗ್ಲಿಶ್ ಮಿಶ್ರಿತ ಹಿಪ್ ಹಾಪ್ ರ್ಯಾಪ್ ಹಾಡುಗಳಿಗೆ ಪ್ರಸಿದ್ದಿ.
“ಈ ಹಾಡಿನ ಅಧಿಕೃತ ಆವೃತ್ತಿ, ಸೋರಿಕೆಯಾಗಿರುವ ಆವೃತ್ತಿಗಿಂತಲೂ ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಶ್ರೋತೃಗಳಿಗೆ ಹೆಚ್ಚಿನ ಸಂತಸ ನೀಡಲಿದೆ” ಎನ್ನುತ್ತಾರೆ ನಿರ್ಮಾಪಕ ಎನ್ ಕೆ ಲೋಹಿತ್.