ಕರ್ನಾಟಕ

ಹೈದರಾಬಾದ್​ನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ

Pinterest LinkedIn Tumblr

Techi

ಹೈದರಾಬಾದ್: ಹೈದರಾಬಾದ್​ನಲ್ಲಿ ಕಾಣೆಯಾಗಿದ್ದ ಕರ್ನಾಟಕ ಟೆಕ್ಕಿ ಅನುಶ್ರಿ ಪಿ.ಜಿ.ಯೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಗಚ್ಚಿಬೌಲಿ ಠಾಣೆಯ ಪೊಲೀಸರು ಅನುಶ್ರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದ್​ನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನುಶ್ರೀ ಅವರು ಸೋಮವಾರ ಸಂಜೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಅನುಶ್ರೀ ಅವರ ತಂದೆ ಹೈದರಾಬಾದ್​ನಲ್ಲಿ ದೂರು ದಾಖಲಿಸಿದ್ದರು. ಅನುಶ್ರಿ ಪತ್ತೆಯಾಗಿರುವ ಸಂಬಂಧ ಆಕೆಯ ಅಕ್ಕ ಅಶ್ವಿನಿ ಮತ್ತು ತಂದೆ ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.

Write A Comment