ದಾವಣಗೆರೆ, ಫೆ.5-ಮೊಬೈಲ್ಗೆ ಬಂದ ಕರೆ ನಂಬಿ ಎಟಿಎಂ ಕಾರ್ಡ್ನ ಪಿನ್ ಸಂಖ್ಯೆ ನೀಡಿ ಸರ್ಕಾರಿ ನೌಕರರೊಬ್ಬರು ತಮ್ಮ ಖಾತೆಯಲ್ಲಿನ 13ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಡಿ.ಜೆ.ಬಡಾವಣೆಯ ನಿವಾಸಿ ಸರ್ಕಾರಿ ನೌಕರ ಕೊಟ್ರಯ್ಯ ಪಿನ್ ನಂಬರ್ ನೀಡಿ ಹಣ ಕಳೆದುಕೊಂಡವರು. ನಿನ್ನೆ ಇವರ ಮೊಬೈಲ್ಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತಮ್ಮನ್ನು ಬ್ಯಾಂಕ್ನ ಉದ್ಯೋಗಿ ಎಂದು ಪರಿಚಯಿಸಿಕೊಂಡು ನಿಮ್ಮ ಎಟಿಎಂ ಕಾರ್ಡ್ ನಿಷ್ಕ್ರಿಯಗೊಂಡಿದೆ ಅದನ್ನು ಸರಿಪಡಿಸಲು ಪಿನ್ ನಂಬರ್ ಬೇಕು ಎಂದು ಹೇಳಿದ್ದಾರೆ. ಮಾತು ನಂಬಿದ ಕೊಟ್ರಯ್ಯ ಅವರು ತಮ್ಮ ಎಟಿಎಂ ಕಾರ್ಡ್ನ ಪಿನ್ ಸಂಖ್ಯೆ ನೀಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಇವರ ಮೊಬೈಲ್ಗೆ ಬ್ಯಾಂಕ್ನಿಂದ 13ಸಾವಿರ ರೂ. ಹಣ ಡ್ರಾ ಮಾಡಿರುವ ಸಂದೇಶ ಬಂದಿದೆ.
ಇದರಿಂದ ಗಾಬರಿಗೊಂಡ ಕೊಟ್ರಯ್ಯ ಅವರು ಕೆನರಾ ಬ್ಯಾಂಕ್ಗೆ ತೆರಳಿ ಪರಿಶೀಲಿಸಿದಾಗ ಪಿನ್ನಂಬರ್ ನೀಡಿ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.
ಇದೇ ಬಡಾವಣೆಯ ನಿವಾಸಿ ನಾಗೇಂದ್ರ ಕುಮಾರ್ ಎಂಬುವರು ಸಹ ಫೆ.1ರಂದು ಇದೇ ರೀತಿ ತಮ್ಮ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿಯ ಮಾತು ನಂಬಿ ಪಿನ್ ಸಂಖ್ಯೆನೀಡಿ 44 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ