ರಾಷ್ಟ್ರೀಯ

ಹಿಂದು ರಾಷ್ಟ್ರವನ್ನಾಗಿಸುವ ಯತ್ನ, ಶರದ್ ಪವಾರ್ ಆರೋಪ

Pinterest LinkedIn Tumblr

Sharad Pawarನವದೆಹಲಿ: ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವ ವ್ಯವಸ್ಥಿತ ಪ್ರಯತ್ನ ಚಾಲ್ತಿಯಲ್ಲಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಾಲಾ ಪಠ್ಯಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚುವ ಮೂಲಕ ಭಾರತವನ್ನು ಹಿಂದು ರಾಷ್ಟ್ರವನ್ನಾಗಿಸುವ ಯತ್ನ ನಡೆಯುತ್ತಿದೆ ಎಂದು ಶುಕ್ರವಾರ ವೈ.ಬಿ. ಚವಾಣ್​ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಆಪಾದಿಸಿದ ಪವಾರ್, ಮುಂದಿನ ಜನಾಂಗದ ಹಿತಕ್ಕಾಗಿ ಇತಿಹಾಸಕಾರರು ಒಂದಾಗಿ ಸತ್ಯವನ್ನು ಮುಂದಿಡಬೇಕು ಎಂದು ಆಗ್ರಹಿಸಿದರು.

ಶಾಲಾ ಪಠ್ಯಪುಸ್ತಕಗಳಲ್ಲಿ ಇತಿಹಾಸ ತಿರುಚುವ ಮೂಲಕ ಕೆಲವರು ಸತ್ಯವನ್ನು ಮರೆಮಾಚುವ ಯತ್ನ ನಡೆಸುತ್ತಿದ್ದಾರೆ. ಇದರಿಂದಾಗಿ ರಾಷ್ಟ್ರದ ಜಾತ್ಯತೀತ ಸ್ವರೂಪಕ್ಕೆ ಹಾನಿಯಾಗುತ್ತಿದೆ. ಕೆಲವರು ಶಿವಾಜಿ ಮಹಾರಾಜನನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ಶಿವಾಜಿ ತನ್ನ ಸೇನೆಯಲ್ಲಿ ಮುಸ್ಲಿಮರಿಗೆ ಪ್ರಮುಖ ಹುದ್ದೆಗಳನ್ನು ನೀಡಿದ್ದ. ಶಿವಾಜಿ ಮುಸ್ಲಿಂ ವಿರೋಧಿಯಲ್ಲ. ಎಲ್ಲ ಇತಿಹಾಸಕಾರರು ಒಟ್ಟಾಗಿ ನಿಜವಾದ ಇತಿಹಾಸವನ್ನು ಪರಿಚಯಿಸಬೇಕು ಎಂದು ಪವಾರ್ ನುಡಿದರು.

Write A Comment