ಮಂಗಳೂರು: ಅಮೆರಿಕದಲ್ಲಿ ಭಾರತೀಯ ಕರಾಟೆ ಕಲೆಯನ್ನು ಪ್ರಚಾರ ಪಡಿಸಲು ಇಂಡೋ-ಅಮೆರಿಕನ್ ಫಿಲ್ಮ್ ಆ್ಯಕ್ಷನ್ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಬಾಲಿವುಡ್ ಸಾಹಸ ನಿರ್ದೇಶಕ ಚಿತಾ ಯಜ್ಞೇಶ್ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕದ ಹಾಲಿವುಡ್‌ನ ಮಕ್ಕಳಿಗೆ ಭಾರತೀಯ ಮಾದರಿಯ ಕರಾಟೆ ಕಲೆಯನ್ನು ಕಲಿಸಲು ಈ ಸಂಸ್ಥೆ ನೆರವಾಗಲಿದೆ.
ಅಮೆರಿಕದಲ್ಲಿ ಕಳೆದ ತಿಂಗಳು 500 ಮಂದಿ ಹಾಲಿವುಡ್ ಮಕ್ಕಳು ಹಾಗೂ ಕರಾಟೆ ಮಾಸ್ಟರ್‌ಗಳಿಗೆ ಭಾರತೀಯ ಕರಾಟೆ ಸಾಹಸ ಪ್ರದರ್ಶನವನ್ನು ತಾನು ನೀಡಿದ್ದು, ಇದರಿಂದ ಪ್ರೇರಿತರಾದ ಬಾಲಿವುಡ್ ಸಿನಿಮಾ ಮಂದಿ ಇಂಡೋ-ಅಮೆರಿಕನ್ ಫಿಲ್ಮ್ ಆ್ಯಕ್ಷನ್ ಸಂಸ್ಥೆಯನ್ನು ಸ್ಥಾಪಿಸಲು ಮುಂದೆ ಬಂದಿದೆ. ಜೂನ್‌ನಲ್ಲಿ ಮತ್ತೆ ಅಮೆರಿಕದಲ್ಲಿ ಹಾಲಿವುಡ್ ಮಕ್ಕಳಿಗೆ ಕರಾಟೆ ಪ್ರದರ್ಶನ ನೀಡುವುದು ಎಂದು ಹೇಳಿದರು.
ಮುಂದೆ ಮಾರ್ಷಲ್ ಆರ್ಟ್ ಎಜುಕೇಶನ್ ವಿಚಾರದಲ್ಲಿ ಹಿಂದಿಯಲ್ಲಿ ಸಿನಿಮಾ ನಿರ್ಮಿಸುವ ಉದ್ದೇಶವಿದೆ. ಚೀನಾ ಸಹಕಾರದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಒಂದೆರಡು ತಿಂಗಳಲ್ಲಿ ಈ ಬಗ್ಗೆ ಅಂತಿಮ ರ್ಧಾರ ಕೈಗೊಳ್ಳುವುದಾಗಿ ಯಜ್ಞೇಶ್ ಶೆಟ್ಟಿ ಹೇಳಿದರು.