ಬೆಂಗಳೂರು, ಫೆ.5-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಕನ್ನಡಕವನ್ನು ತೆಗೆದಿಟ್ಟು 50 ಸಾವಿರ ರೂ. ಕೊಟ್ಟು ಖರೀದಿಸಿ ಎಂದು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳಿಗೆ ಸುದ್ದಿಗಾರರು ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಕೂಡಲೇ ತಮ್ಮ ಕನ್ನಡಕ ಕಳಚಿಟ್ಟು ಖರೀದಿಸುವಂತೆ ತಿಳಿಸಿದರು.
ಅಲ್ಲದೆ, ತಮ್ಮ ವಾಚನ್ನು ತೋರಿಸಿ ಒಂದು ಲಕ್ಷ ರೂ. ಕೊಟ್ಟು ಯಾರಾದರೂ ನೀವೇ ತೆಗೆದುಕೊಳ್ಳಿ ಎಂದರು. ಪ್ರತಿಪಕ್ಷದವರು ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.