ರಾಷ್ಟ್ರೀಯ

ಕಾಪು ಸಮುದಾಯದ ಕಿಚ್ಚು ಆರಿಲ್ಲ : ಪೂರ್ವ ಗೋದಾವರಿಯಲ್ಲಿ ಅಮರಣಾಂತ ಉಪವಾಸ ಆರಂಭ

Pinterest LinkedIn Tumblr

kapuಹೈದರಾಬಾದ್, ಫೆ.5-ಕಾಪು ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಇಲ್ಲಿ ಮಾಜಿ ಸಚಿವ ಮುದಗಾರ ಪದ್ಮನಾಭನ್ ಕುಟುಂಬದ ನೇತೃತ್ವ ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.

ಆಂಧ್ರ ಪೂರ್ವ ಗೋದಾವರಿ ಯಲ್ಲಿ ಆರಂಭಗೊಂಡಿರುವ ನಿರಶನಕ್ಕೆ ನೂರಾರು ಮಂದಿ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ಪ್ರತಿಭಟನೆ ವೇಳೆಯಲ್ಲಿ ಹಿಂಸಾಚಾರ ನಡೆದು ಇಡೀ ಆಂಧ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಸಿಎಂ ಚಂದ್ರಬಾಬು ನಾಯ್ಡು ತುರ್ತು ಕ್ರಮ ಕೈಗೊಂಡು ಕಾಪು ಸಮುದಾಯದ ಬೇಡಿಕೆ ಯನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತ್ತು.
ಆದರೆ, ಈಗ ಪದ್ಮನಾಭನ್ ನೇತೃತ್ವದಲ್ಲಿ ಕಾಪು ಸಮುದಾಯದ ನಾಯಕರು ಮೀಸಲಾತಿ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ತಕ್ಷಣ ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದು ನಿರಶನ ಆರಂಭಿಸಿದ್ದಾರೆ.
ಇದಲ್ಲದೆ ಇತ್ತೀಚೆಗೆ ನಡೆದ ಘರ್ಷಣೆ ಯಲ್ಲಿ ಹಲವು ಕಾಪು ನಾಯಕರ ಮೇಲೆ ಪ್ರಕರಣ ದಾಖಲಿಸ ಲಾಗಿದ್ದು, ಅದನ್ನು ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ. ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ ಹಿಂಸೆ ನಡೆಯಲು ಕಾರಣ ಏನು ಎಂಬುದನ್ನು ತಿಳಿಯಲು ಸಿಬಿಐ ತನಿಖೆ ನಡೆಸಲು ಚಿಂತನೆ ಕೂಡ ನಡೆಸಲಾಗುತ್ತಿದೆ. ಆಮರಣಾಂತ ಉಪವಾಸದಲ್ಲಿ ಆಡಳಿತಾರೂಢ ಟಿಡಿಪಿಯ ಇಬ್ಬರು ಶಾಸಕರೂ ಪಾಲ್ಗೊಂಡಿ ದ್ದಾರೆ. ಪರಿಸ್ಥಿತಿ ಯಾವುದೇ ಸಂದರ್ಭದಲ್ಲಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇರುವುದರಿಂದ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Write A Comment