ಕರ್ನಾಟಕ

ರಾಮನಿಗೆ ಗಂಡಸ್ತನದ ಬಗ್ಗೆ ಅನುಮಾನವಿತ್ತು: ಭಗವಾನ್‌

Pinterest LinkedIn Tumblr

28-humanites-dept-(2)ಮೈಸೂರು: ಶ್ರೀರಾಮಚಂದ್ರ ಮದ್ಯವ್ಯಸನಿ, ಸ್ತ್ರೀಲೋಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌, ಇದೀಗ ರಾಮನಿಗೆ ಗಂಡಸುತನದ ಬಗ್ಗೆ ಅನುಮಾನವಿತ್ತು ಎಂದು ಮತ್ತೂಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ತನ್ನ ಗಂಡಸುತನದ ಬಗ್ಗೆ ರಾಮನಿಗೇ ಅನುಮಾನವಿತ್ತು. ಹೀಗಾಗಿ ಸೀತೆಯನ್ನು ಎರಡೆರಡು ಬಾರಿ ಪರೀಕ್ಷೆಗೊಳಪಡಿಸಿದ್ದ. ಅದೂ ಎರಡು ಮಕ್ಕಳಾದ ಮೇಲೆ ಅನುಮಾನಿಸಿದ್ದ. ಈಗಿನ ಮಹಿಳೆಯರಾಗಿದ್ದರೆ ತಕ್ಕ ಉತ್ತರ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಮೈಸೂರು ವಿವಿಯ ದಲಿತ ವಿದ್ಯಾರ್ಥಿ ಒಕ್ಕೂಟ ಏರ್ಪಡಿಸಿದ್ದ ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ ಅವರಿಗೆ ನುಡಿನಮನ ಹಾಗೂ ವಿ.ವಿ.ಗಳಲ್ಲಿ ಅಹಿಂದ ವಿದ್ಯಾರ್ಥಿಗಳ ಸ್ಥಿತಿಗತಿ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರುಷರಿಗಿದ್ದಂತೆ ಆ ಕಾಲದಲ್ಲಿ ಮಹಿಳೆಯರಿಗೂ ಆಸ್ತಿಯ ಹಕ್ಕು ಇದ್ದಿದ್ದರೆ ಸೀತೆ ರಾಮನ ಜತೆಗೆ ವನವಾಸಕ್ಕೆ ಹೋಗುತ್ತಲೇ ಇರಲಿಲ್ಲ. ಆಕೆಗೆ ಆಸ್ತಿ ಹಕ್ಕು ಇಲ್ಲದ ಕಾರಣಕ್ಕೆ ರಾಮನ ಜತೆ ವನವಾಸಕ್ಕೆ ಹೋಗಬೇಕಾಯಿತು ಎಂದು ತಿಳಿಸಿದರು.

ರಾಮಾಯಣದಲ್ಲಿ ರಾಮ ಎಂದೂ ರೈತರು, ಬಡವರ ಪರವಾಗಿರಲಿಲ್ಲ. ಪಟ್ಟಾಭಿಷೇಕ ಸಂದರ್ಭದಲ್ಲಿ ಶ್ರೀರಾಮ ಪುರೋಹಿತ ವರ್ಗಕ್ಕೆ 38 ಕೋಟಿ ರೂ. ಚಿನ್ನದ ನಾಣ್ಯಗಳನ್ನು ನೀಡಿದ್ದಾನೆ. ಹೀಗಾಗಿ ಪುರೋಹಿತಶಾಹಿ ವರ್ಗ ರಾಮರಾಜ್ಯ ಬೇಕು ಎಂದು ಒತ್ತಾಯಿಸುತ್ತಿದೆ ಎಂದೂ ಹೇಳಿದರು.

ನಾನು ಪೂಜೆ ಮಾಡಲ್ಲ: ರಾಮನನ್ನು ವಿಶ್ಲೇಷಣೆ ಮಾಡಿದರೆ ಭಗವಾನ್‌ ದೇವರನ್ನು ಬೈತಾನೆ ಎಂದು ಹೇಳುತ್ತಾರೆ. ನಾನಂತೂ ಪೂಜೆ ಮಾಡಲ್ಲ. ದೇವರು ಎಲ್ಲರನ್ನೂ ರಕ್ಷಿಸುತ್ತಾನೆ ಎಂಬ ಹೇಳಿಕೆ ಸುಳ್ಳು. ಭಾರತದ ಮೇಲೆ 26 ಬಾರಿ ದಾಳಿ ನಡೆದಿದೆ. ಆಗ ಈ ದೇವರು ದೇಶವನ್ನೇಕೆ ಕಾಪಾಡಲಿಲ್ಲ ಎಂದು ಪ್ರಶ್ನಿಸಿದರು.

ಪ್ರೊ.ಕಾಳೇಗೌಡ ನಾಗವಾರ, ಶಬೀರ್‌ ಮುಸ್ತಪಾ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು ಮತ್ತಿತರರಿದ್ದರು.

ಕುಲಪತಿ ಹುದ್ದೆ
ನನ್‌ ಎಕ್ಕಡ ಇದ್ಹಂಗೆ!
ಮೈಸೂರು: ಎನ್‌ಡಿಎ ಎಂದರೆ ರಾಷ್ಟ್ರೀಯ ವಿಧ್ವಂಸಕರ ಕೂಟ. ಇಂತಹ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯಂತಹ ಪ್ರಮುಖ ಇಲಾಖೆಯನ್ನು ಮೂರನೇ ದರ್ಜೆ ಕಲಾವಿದೆಗೆ ನೀಡಲಾಗಿದೆ. ಪ್ರಧಾನಿ ಮೋದಿಗೆ ಇಷ್ಟವಿದ್ದರೆ ಸ್ಮತಿ ಇರಾನಿ ಅವರನ್ನೇ ಹೋಂ ಮಿನಿಸ್ಟರ್‌ ಮಾಡಿಕೊಳ್ಳಬೇಕಿತ್ತು ಎಂದು ಮೈಸೂರು ವಿವಿ ಪ್ರವಾಸೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹೇಶ್‌ ಚಂದ್ರಗುರು ಲೇವಡಿ ಮಾಡಿದರು.

ಹುಚ್ಚ ವೆಂಕಟ್‌ ಡೈಲಾಗ್‌ನಲ್ಲೇ ಹೇಳೆ¤àನಿ ಕುಲಪತಿ ಹುದ್ದೆ ನನ್‌ ಎಕ್ಕಡ ಇದ್ಹಂಗೆ. ಎಲ್ಲ ಬಿಟ್ಟವ ಕುಲಪತಿ ಆಗ್ತಿದ್ದಾನೆ. ಮೈಸೂರು ವಿವಿಯನ್ನು ಕುವೆಂಪು ಭಜನಾ ಮಂಡಳಿಯೊಂದು ನಿಯಂತ್ರಿಸುತ್ತಿದೆ ಎಂದು ಇದೇ ವೇಳೆ ಆಕ್ರೋಶಭರಿತವಾಗಿ ಹೇಳಿದರು.
-ಉದಯವಾಣಿ

Write A Comment