ಕರ್ನಾಟಕ

8 ಲಕ್ಷ ಎನ್‍ಇಡಿ ಬಲ್ಬ್ ವಿತರಣೆ

Pinterest LinkedIn Tumblr

LED-Bulbಬೆಂಗಳೂರು, ಜ.26: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಲ್.ಇ.ಡಿ. ಬಲ್ಬುಗಳನ್ನು ಅಗ್ಗದ ದರದಲ್ಲಿ ವಿತರಿಸುವ `ಹೊಸಬೆಳಕು’ ಎಂಬ ಯೋಜನೆಯಡಿ ಒಂದು ತಿಂಗಳಲ್ಲಿ 8 ಲಕ್ಷ ಎಲ್.ಇ.ಡಿ ಬಲ್ಬುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಈ ಯೋಜನೆಗೆ ಸಾರ್ವಜನಿಕ ಪ್ರೋತ್ಸಾಹ ನೀಡುತ್ತಿದ್ದು, ತಮ್ಮ ಮನೆಗಳಲ್ಲಿ ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪ್ರತಿಯಾಗಿ ರಾಜ್ಯದ ಇಂಧನ ಉಳಿತಾಯದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ.
ಗೃಹಬಳಕೆ ಉತ್ತಮ ವಿದ್ಯುತ್ ದೀಪ ಅಳವಡಿಕೆ ಕಾರ್ಯಕ್ರಮ (ಡಿ.ಇ.ಎಲ್.ಪಿ) ದ ಅಡಿಯಲ್ಲಿ, 9 ವ್ಯಾಟ್ ಸಾಮಥ್ರ್ಯದ ಎಲ್.ಇ.ಡಿ ಬಲ್ಬುಗಳನ್ನು ಪ್ರಸ್ತುತ ರೂ 100 ಪ್ರತಿ ಎಲ್.ಇ.ಡಿ ಬಲ್ಬುನಂತೆ (9ವ್ಯಾಟ್ ಎಲ್.ಇ.ಡಿ. ಬಲ್ಬುನ ಮಾರುಕಟ್ಟೆ ದರವು ಅಂದಾಜು ರೂ 350 ಆಗಿರುತ್ತದೆ) ವಿತರಿಸಲಾಗುತ್ತಿದೆ. ಎಲ್.ಇ.ಡಿ. 9 ವ್ಯಾಟ್ ಸಾಮಥ್ರ್ಯದ ಬಲ್ಬಿನ ಸಾಮಥ್ರ್ಯವು 60 ವ್ಯಾಟ್ ಸಾಮಥ್ರ್ಯದ ಸಾಂಪ್ರದಾಯಕ ಬುರುಡೆ ಬಲ್ಬ್ ಮತ್ತು 14 ವ್ಯಾಟ್ ಸಿ.ಎಫ್.ಎಲ್. ಬಲ್ಬುಗಳಿಗೆ ಸಮನಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಮಾರಾಟ ಮಾಡಲ್ಪಡುವ ಬಲ್ಬುಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಮೂರು ಮರ್ಷಗಳ ಬಾಳ್ವಿಕೆಯ ಭರವಸೆಯನ್ನು ಕೂಡ ಹೊಂದಿರುತ್ತವೆ. ಪ್ರತಿ ಎಲ್.ಇ.ಡಿ ಬಲ್ಬುಗಳ ಉಪಯೋಗದಿಂದ ವಿದ್ಯುತ್ ಬಳಕೆಯಲ್ಲಿ ವಾರ್ಷಿಕ ರೂ. 118 ಉಳಿತಾಯವಾಗುತ್ತದೆ ಎಂದು ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ವಿತರಣಾ ಕೇಂದ್ರಗಳು:
ಎಲ್.ಇ.ಡಿ ಬಲ್ಬುಗಳನ್ನು ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿಗಳಲ್ಲಿ ದೊರಕುವಂತೆ ಮಾಡಲಾಗಿದೆ. ಮುಂದುವರೆದು ಎಲ್.ಇ.ಡಿ. ಬಲ್ಬುಗಳನ್ನು ಕೆಳಕಂಡ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅನುಕೂಲ ಮಾಡಲಾಗಿದೆ. ತಮ್ಮ ಸಮೀಪದ ಎಲ್.ಇ.ಡಿ ಬಲ್ಬು ವಿತರಣಾ ಕೇಂದ್ರದ ಮಾಹಿತಿಯನ್ನು ಪಡೆಯಲು ಗ್ರಾಹಕರು ತಿತಿತಿ.ಜeಟಠಿ.iಟಿ ಅಂತರ್ಜಾಲ ತಾಣದ ಮುಖಾಂತರ ಕೂಡ ಪಡೆಯಬಹುದು.
ಅಗತ್ಯವಾದ ದಾಖಲೆಗಳು: ಈ ಯೋಜನೆಯ ಲಾಭ ಪಡೆಯಲು ಗ್ರಾಹಕರು ಇತ್ತೀಚಿನ ವಿದ್ಯುಚ್ಛಕ್ತಿ ಬಿಲ್‍ನೊಂದಿಗೆ ಗುರುತಿನ ಚೀಟಿ ತೋರಿಸಿ ಎಲ್.ಇ.ಡಿ. ಬಲ್ಬುಗಳನ್ನು ಪಡೆಯಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Write A Comment