Uncategorized

ಹೊಲಾಂಡೆ ಭೋಜನಕೂಟದಲ್ಲಿ ಐಶ್ ಮಿಂಚು

Pinterest LinkedIn Tumblr

aishwarya-ನವದೆಹಲಿ: ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರಿಗೆ ಮಂಗಳವಾರ ಇಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಭೋಜನಕೂಟದಲ್ಲಿ ಚಿತ್ರನಟಿ ಐಶ್ವರ್ಯ ರೈ ಬಚ್ಚನ್ ಅವರು ಕೆಂಪು ಬನಾರಸ್ ರೇಷ್ಮೆ ಸೀರೆಯಲ್ಲಿ ಮಿಂಚಿದರು.

ತಮ್ಮ ಹೊಸ ಚಿತ್ರ ‘ಸರಬ್​ಜಿತ್’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ಐಶ್ವರ್ಯ, ತಮ್ಮ ಬಿಗಿ ಕೆಲಸದ ಮಧ್ಯೆಯೂ ಬಿಡುವು ಮಾಡಿಕೊಂಡು ಹೊಲಾಂಡೆ ಭೋಜನಕೂಟಕ್ಕೆ ಆಗಮಿಸಿದರು. ಫ್ರೆಂಚ್ ರಾಯಭಾರಿ ಫ್ರಾಂಕೋಯಿಸ್ ರಿಚಿಯರ್ ಈ ಭೋಜನಕೂಟದ ವ್ಯವಸ್ಥೆ ಮಾಡಿದ್ದರು.

ರಾಜಪಥದಲ್ಲಿ ನಡೆದ ರಾಷ್ಟ್ರದ ವರ್ಣರಂಜಿತ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡ ಹೊಲಾಂಡೆ ಅವರಿಗೆ ಏರ್ಪಡಿಸಲಾದ ವಿಶೇಷ ಭೋಜನ ಕೂಟಕ್ಕೆ ಆಗಮಿಸುವಂತೆ ರಿಚಿ ಅವರು 42ರ ಹರೆಯದ ಚಿತ್ರನಟಿಗೆ ಆಹ್ವಾನ ನೀಡಿದ್ದರು. ಭೋಜನ ಕೂಟದಲ್ಲಿ ಮಿಂಚುತ್ತಿದ್ದ ಐಶ್ವರ್ಯ ರೈ ಅವರ ಚಿತ್ರವನ್ನು ಆಕೆಯ ಸಿನಿ ಪ್ರಚಾರಕರು ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದು, ರೈ ಅವರು ಜನತೆಗೆ ಗಣರಾಜ್ಯೋತ್ಸವ ಶುಭಾಷಯಗಳನ್ನು ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

Write A Comment