Uncategorized

ಮಂಗಳೂರಿನಲ್ಲಿ “45“ ಸಿನಿಮಾ ತಂಡ : ಮೋಡಿ ಮಾಡಿದ “ಅಫ್ರೋ ಟಪಂಗ್“ ಹಾಡಿನ ಪ್ರಮೋಷನ್

Pinterest LinkedIn Tumblr

ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿಗೆ ಅನುಶ್ರೀ ಸಾಥ್!

ಮಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ “45” ಸಿನಿಮಾದ ಆಫ್ರೋ ಟಪಂಗ್ ಹಾಡಿನ ಪ್ರಮೋಷನ್ ಗಾಗಿ ಚಿತ್ರತಂಡ ಮಂಗಳೂರಿಗೆ ಆಗಮಿಸಿದ್ದು, ನಗರದ ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ಈ ಸಂದರ್ಭ ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ. ಬಿಜು ಅವರಿಗೆ ಖ್ಯಾತ ನಿರೂಪಕಿ ಅನುಶ್ರೀ ಶೆಟ್ಟಿ ಸಾಥ್ ನೀಡಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಆಕರ್ಷಣೆ ಹೆಚ್ಚಿಸಿದ್ದು ವಿಶೇಷವಾಗಿತ್ತು.

ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ ಅವರು, “ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ಚಿತ್ರವು ಡಿಸೆಂಬರ್ 25ರಂದು ಬಿಡುಗಡಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.

ನಟ ರಾಜ್ ಬಿ ಶೆಟ್ಟಿ ಮಾತಾಡಿ, ”45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಅವರೊಂದಿಗೆ ನಟಿಸಿರುವುದು ರೋಮಾಂಚನಕಾರಿ ಅನುಭವ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಆಫ್ರೋ ಟಪಂಗ್ ಹಾಡಿಗೆ ಒಳ್ಳೇ ರೆಸ್ಪಾನ್ಸ್ ಬರುತ್ತಿದೆ. ತುಳುವರು ಸಿನಿಮಾ ನೋಡಿ“ ಎಂದರು.

ಫೋರಂ ಫಿಜಾ ಮಾಲ್ ನ ಬಿ.ಎಂ.ಫಾರೂಕ್ ಮಾತಾಡಿ, ”ಚಿತ್ರತಂಡ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದೆ. ತುಳು ಸಾಹಿತ್ಯವನ್ನು ಹಾಡಿನಲ್ಲಿ ಬಳಕೆ ಮಾಡಿರುವುದು ನಮಗೆ ಹೆಮ್ಮೆಯ ವಿಚಾರ“ ಎಂದರು.
ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಸಿನಿಮಾದಲ್ಲಿ ಉಗಾಂಡಾ ಮಕ್ಕಳ ನೃತ್ಯ! : ಇದೇ ಪ್ರಥಮ

ರೀಲ್ಸ್ ಮೂಲಕವೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದ ಉಗಾಂಡಾ ದೇಶದ ಹಳ್ಳಿಯ ಮಕ್ಕಳ ತಂಡ “ಗೆಟ್ಟೋ ಕಿಡ್ಸ್” ಅನ್ನು 45 ಸಿನಿಮಾದ ಟಪಂಗ್ ಹಾಡಿನಲ್ಲಿ ಕುಣಿಸಿರುವುದು ಸಿನಿಮಾದ ವಿಶೇಷವಾಗಿದೆ. ಈ ಕುರಿತು ಮಾತಾಡಿದ ನಿರ್ದೇಶಕ ಅರ್ಜುನ್ ಜನ್ಯ ರೀಲ್ಸ್ ಮೂಲಕ ನೋಡಿದ್ದ ಮಕ್ಕಳ ಪ್ರಸಿದ್ಧ ನೃತ್ಯ ತಂಡವನ್ನು ಕರೆಸುವ ಮೂಲಕ ಸಿನಿಮಾದ ಹಾಡನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಯಶಸ್ಸು ಸಿಕ್ಕಿದೆ“ ಎಂದರು.

Comments are closed.