ಕರ್ನಾಟಕ

ಬೆಂಗಳೂರು ಪ್ರೆಸ್‌ಕ್ಲಬ್‌ ಆವರಣದೊಳಗಿದ್ದ ಗಂಧದ ಮರ ಕಳವು

Pinterest LinkedIn Tumblr

gandaಬೆಂಗಳೂರು, ಜ.22- ನಗರದ ಪ್ರೆಸ್‌ಕ್ಲಬ್ ಆವರಣದೊಳಗೆ ನುಗ್ಗಿದ ಶ್ರೀಗಂಧ ಚೋರರು ಅಲ್ಲಿದ್ದ ಗಂಧದ ಮರವನ್ನು ಕತ್ತರಿಸಿ ಕದ್ದೊಯ್ದಿರುವ ಘಟನೆ ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರೆಸ್‌ಕ್ಲಬ್‌ನ ಪ್ರವೇಶ ದ್ವಾರದ ಎಡಭಾಗದಲ್ಲಿದ್ದ ಗಂಧದ ಮರವನ್ನು ಕತ್ತರಿಸಿರುವುದಲ್ಲದೆ, ಆವರಣದ ಮಧ್ಯಭಾಗದ ಕಾಂಪೌಂಡ್ ಸಮೀಪ ಇದ್ದ ಬೃಹತ್ ಗಂಧದ ಮರವನ್ನೂ ಕತ್ತರಿಸಿ ಕೆಲವು ತುಂಡುಗಳನ್ನು ಕದ್ದೊಯ್ದಿದ್ದು, ಉಳಿದದ್ದನ್ನು ಅಲ್ಲಿಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಸುಮಾರು ರಾತ್ರಿ 11 ಗಂಟೆಯವರೆಗೂ ಪ್ರೆಸ್‌ಕ್ಲಬ್‌ನಲ್ಲಿ ಸಾಮಾನ್ಯವಾಗಿ ಚಟುವಟಿಕೆ ಇದ್ದೇ ಇರುತ್ತದೆ. ರಾತ್ರಿಯಿಡೀ ವಾಹನಗಳು ಸಂಚರಿಸುತ್ತಲೇ ಇರುತ್ತವೆ.

ಮುಂಜಾನೆ 4 ಮತ್ತು 5 ಗಂಟೆಗೆ ವಾಯುವಿಹಾರ ಮಾಡುವವರು ಕಬ್ಬನ್ ಪಾರ್ಕ್‌ಗೆ ಬರುತ್ತಲೇ ಇರುತ್ತಾರೆ. ಕ್ಲಬ್‌ನಲ್ಲಿ ಸೆಕ್ಯೂರಿಟಿಯೂ ಇರುತ್ತಾರೆ. ಅದು ಯಾವ ಮಾಯದಲ್ಲಿ ಗರಗಸದಿಂದ ಗಂಧದ ಮರಗಳನ್ನು ಕೊಯ್ದಿದ್ದಾರೆ ಎಂಬುದು ಅಚ್ಚರಿಯಾಗಿದೆ. ವಿಧಾನಸೌಧ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment