ರಾಷ್ಟ್ರೀಯ

ದೇಶದ ವಿವಿಧೆಡೆ ಎಟಿಎಸ್‌ ದಾಳಿ :14 ಶಂಕಿತ ಐಸಿಸ್‌ ಉಗ್ರರ ಸೆರೆ

Pinterest LinkedIn Tumblr

isis (1) ನವದೆಹಲಿ : ದೇಶದ ವಿವಿಧೆಡೆ ಏಕಕಾಲಕ್ಕೆ ಶುಕ್ರವಾರ ರಾತ್ರಿ ದಾಳಿ ನಡೆಸಿರುವ ಉಗ್ರ ನಿಗ್ರಹದಳ ಪೊಲೀಸರು ಕರ್ನಾಟಕ, ಹೈದರಾಬಾದ್‌, ಮುಂಬಯಿ ಮತ್ತು ಉತ್ತರ ಪ್ರದೇಶದಲ್ಲಿ ಒಟ್ಟು 14 ಮಂದಿ ಶಂಕಿತ ಐಸಿಸ್‌ ಉಗ್ರರನ್ನು ಬಂಧಿಸಿದ್ದಾರೆ. ಇದರಿಂದಾಗಿ  ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಐಸಿಸ್‌ ಉಗ್ರರು ದೇಶದಲ್ಲಿ ಬೇರು ಬಿಡಲು ಯತ್ನ ಆರಂಭಿಸಿರುವುದು ಧೃಡಪಟ್ಟಿದೆ.

ಬೆಂಗಳೂರು,ಮಂಗಳೂರು,ಹುಬ್ಬಳ್ಳಿ,ಚಿಕ್ಕಮಗಳೂರು ಮತ್ತು ತುಮಕೂರಿನಲ್ಲಿ  6 ಮಂದಿ ಶಂಕಿತ ಉಗ್ರರನ್ನು ಎಟಿಎಸ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೈದರಾಬಾದ್‌ ನಲ್ಲಿ ನಾಲ್ವರು ,ಮುಂಬಯಿಯಲ್ಲಿ ಓರ್ವ ಮತ್ತು  ಉತ್ತರ ಪ್ರದೇಶದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನ ಪೆರ್ಮುದೆಯ ಲ್ಲಿ ಶುಕ್ರವಾರ ನಸುಕಿನ 1 ಗಂಟೆಯ ವೇಳೆ ಕಾರ್ಯಾಚರಣೆ ನಡೆಸಿದ ಉಗ್ರ ನಿಗ್ರಹ ದಳದ ಪೊಲೀಸರು 25 ವರ್ಷದ ನಜ್ಮುಲ್‌ ಹುದಾ ಎಂಬಾತನನ್ನು ಬಂಧಿಸಿದ್ದಾರೆ.

ಹುದಾ ಕೆಮಿಕಲ್‌ ಇಂಜಿನಿಯರಿಂಗ್‌ ಮುಗಿಸಿ ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದು, ಯುವಕರನ್ನು ಐಸಿಸ್‌ ಸೇರುವಂತೆ ಮನವೊಲಿಸುವ ಕಾರ್ಯ ನಡೆಸುತ್ತಿದ್ದ ಎಂದು ಹೇಳಲಾಗಿದೆ.

ತುಮಕೂರಿನ ಗುಮ್ನಿ ಸರ್ಕಲ್‌ ನಿವಾಸದಲ್ಲಿ ಸಯ್ಯದ್‌ ಹುಸೇನ್‌ (25) ಎಂಬಾತನನ್ನು  ಬೆಳಗಿನ ಜಾವ  4 ಗಂಟೆಯ ವೇಳೆಗೆ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇಬ್ಬರು ಉಗ್ರರನ್ನು ಶಸ್ತ್ರಾಸ್ತ್ರಗಳ ಸಮೇತ ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಎಟಿಎಸ್‌ ಪೊಲೀಸರ ಕಾರ್ಯಾಚರಣೆಗೆ ಎನ್‌ಐಎ ಅಧಿಕಾರಿಗಳು ಸಾಥ್‌ ನೀಡಿದ್ದರು.

ಐಸಿಸ್‌ ದೇಶದಲ್ಲಿ ಬೇರೂರಲು ಯತ್ನಿಸುತ್ತಿರುವ ಹಿನ್ನಲೆಯಲ್ಲಿ  ವಿವಿಧ ರೀತಿಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು , ಅಂತರ್ಜಾಲ ,ದೂರಾವಾಣಿ ಕರೆಗಳ ಜಾಡು ಬೆನ್ನಟ್ಟಿ ಐಸಿಸ್‌ ನಂಟು ಹೊಂದಿರುವ ಶಂಕಿತರನ್ನು ವಶಕ್ಕೆ ಬಂಧಿಸಿದ್ದಾರೆ.

ಕಳೆದ 6 ತಿಂಗಳು ಗಳಿಂದ ಬಂಧಿತರ ಮೇಲೆ ಎಟಿಎಸ್‌ ಹದ್ದಿನ ಕಣ್ಣಿಟ್ಟು ಐಸಿಸ್‌ ನಂಟು ಹೊಂದಿದು ಧೃಡ ಪಟ್ಟ ಹಿನ್ನಲೆಯಲ್ಲಿ ಕಾರ್ಯಾಚರಣೆಗಿಳಿದಿತ್ತು.

ದೇಶದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು ಇನ್ನೂ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
-ಉದಯವಾಣಿ

Write A Comment