ಕರ್ನಾಟಕ

ಸಾಹಿತ್ಯ ಸಂಭ್ರಮ ಉದ್ಘಾಟಿಸಿದ ಡಾ.ಚಂದ್ರಶೇಖರ ಕಂಬಾರ

Pinterest LinkedIn Tumblr

Sahitya-Sambramaಧಾರವಾಡ: ಸಾಹಿತ್ಯ ಯಾರ ಕುರಿತು ನಿರ್ಮಾಣ ಮಾಡಬೇಕು ಎಂಬುದೀಗ ಮಹತ್ವದ ಚರ್ಚೆಯಾಗಬೇಕಿದೆ. ಯಾರಿಗೋಸ್ಕರ ಕಾವ್ಯ ಬರೆಯುತ್ತೇವೆ ಎಂಬ ಅರಿವು ಮೊದಲಿನವರಿಗಿತ್ತು. ಅದರೆ ಇಂದು ಆ ಅರಿವು ನಮಗಿಲ್ಲ ಎಂದು ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶುಕ್ರವಾರ ಧಾರವಾಡದಲ್ಲಿ ಆರಂಭಗೊಂಡ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಪಂಪ, ರನ್ನ ಮತ್ತಿತರರು ಒಡ್ಡೊಲಗ ಕುರಿತು, ಶರಣರು ದೇವರ ಕುರಿತು, ಹರಿಹರರ ಕಾಲದಲ್ಲಿ ಜನರ ಬದುಕಿನ ಬಗ್ಗೆ ಬರೆಯುತ್ತಿದ್ದೆವು. ಆದರೆ ಈಗ ವಸಾಹತುಶಾಹಿಯ ಪ್ರಭಾವದಿಂದಾಗಿ ಸಾಹಿತ್ಯ ಒಂದು ಸರಕಿನಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವ್ಯಕ್ತಿಯ ವೈಭವೀಕರಣ ಹೆಚ್ಚಾಗಿದೆ. ಮೊದಲೆಲ್ಲ ಸಾಹಿತ್ಯದಲ್ಲಿ ಬರುತ್ತಿದ್ದ ಸ್ವರ್ಗ, ನರಕ, ದೇವಲೋಕ, ದೇವರು ಎಂಬ ಭವ್ಯ ಕಲ್ಪನೆ ಅಳಿಸಿ ಹೋಗಿವೆ. ಈಗೇನಿದ್ದರೂ ಎಲ್ಲ ಕಡೆ ಏಕಮುಖ ವ್ಯಕ್ತಿ ಪರಂಪರೆ ವಿಜೃಂಭಿಸುತ್ತಿದೆ. ಹಳೆ ಕವಿಗಳಿಗೆ ವಸ್ತು ಆಯ್ಕೆ ಸಮಸ್ಯೆಯೇ ಆಗಿರಲಿಲ್ಲ. ಆದರೀಗ ಇಂದಿನ ಕವಿಗಳಿಗೆ ವಸ್ತು ಹುಡುಕಾಟ ನೈತಿಕ ಸವಾಲು ಆಗಿದೆ ಎಂದರು.

Write A Comment