ಕರ್ನಾಟಕ

ರಾಜ್ಯದಾದ್ಯಂತ ಸಂಕ್ರಾಂತಿ ಸಡಗರ

Pinterest LinkedIn Tumblr

sankrantiಬೆಂಗಳೂರು, ಜ.14-ಸಂಕ್ರಾಂತಿ ಎಂದರೆ ನಮ್ಮ ಬದುಕಿನ ಸಂಕ್ರಮಣ ಕಾಲ. ಕೃಷಿಗೆ ಸಂಬಂಧಿಸಿದ ಸಮೃದ್ಧಿಯ ಹಬ್ಬ. ಸುಗ್ಗಿ ಕಾಲದಲ್ಲಿ ಬರುವ ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ವಿವಿಧ ಪ್ರದೇಶಗಳಲ್ಲಿ ಈ ಹಬ್ಬವನ್ನು ಭಿನ್ನ-ಭಿನ್ನವಾಗಿ ಆಚರಿಸುತ್ತಾರೆ. ಭೂದೇವಿಯು ಸಸ್ಯ ಶಾಮಲೆಯಾಗಿ ಕಂಗೊಳಿಸುವ ಕಾಲ. ಉತ್ತರಾಯಣ ಪುಣ್ಯಕಾಲ ಸೂರ್ಯದೇವರು ಧನುರ್‌ರಾಶಿಯಿಂದ ಮಕರ ರಾಶಿಗೆ ತನ್ನ ಪಥವನ್ನು ಬದಲಿಸುವ ಪರ್ವಕಾಲ. ಎಳ್ಳು ಬೆಲ್ಲವನ್ನು ಹಂಚಿ ಹಿಗ್ಗಿನಿಂದ ಆಚರಿಸುವ ಸುಗ್ಗಿಯ ಹಬ್ಬಕ್ಕೆ ಗ್ರಾಮೀಣ-ನಗರ ಪ್ರದೇಶವೆಂಬ ಭೇದವಿಲ್ಲ. ಹಳ್ಳಿಗಳಲ್ಲಿ, ನಗರಗಳಲ್ಲಿ ಸಂಪ್ರದಾಯಬದ್ಧವಾಗಿ ಈ ಹಬ್ಬವನ್ನು ಜನರು ಆಚರಿಸುತ್ತಾರೆ. ಬೆಂಗಳೂರು ನಗರದಲ್ಲಿ ಹಬ್ಬದ ಸಡಗರ ಜೋರಾಗಿತ್ತು. ಹಬ್ಬಕ್ಕೆ ಅಗತ್ಯವಾದ ಪದಾರ್ಥಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದರು.

ಎಳ್ಳು-ಬೆಲ್ಲ, ಕಬ್ಬು, ಕಡಲೆ,  ಗೆಣಸು, ಕೊಬ್ಬರಿ, ಹಸಿ ಅವರೆಕಾಯಿ, ನೆಲಗಡಲೆಗಳ ಬೆಲೆ ಏರಿಕೆ ಇದ್ದರೂ ಜನ ಕೊಳ್ಳುತ್ತಿದ್ದರು.

ನಗರದ ವಿವಿಧ ಮಾರುಕಟ್ಟೆಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಹಬ್ಬದ ಪದಾರ್ಥಗಳ ಬಿಕರಿ ಜೋರಾಗಿತ್ತು. ಕಬ್ಬಿನ ಜಲ್ಲೆ, ಹಸಿ ಗೆಣಸು, ಹಸಿ ಅವರೆಕಾಯಿ, ಹಸಿ ಕಡಲೆಕಾಯಿಯನ್ನು ಜನ ಕೊಳ್ಳುತ್ತಿದ್ದರು. ಬಾಳೆ ಹಣ್ಣು ಬೆಲೆ ಇಳಿಮುಖವಾಗಿತ್ತು. ಅದನ್ನು ಹೊರತು ಪಡಿಸಿದರೆ ಹೂವು-ಹಣ್ಣು ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿತ್ತು. ಆದರೂ ಜನರ ಸಂಭ್ರಮ ತಗ್ಗಿರಲಿಲ್ಲ. ನಾಳಿನ ಹಬ್ಬ ಆಚರಣೆಗೆ ಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು.

Write A Comment