
ಬೆಂಗಳೂರು,ಡಿ.12: ನಂದಿಬೆಟ್ಟದ ಕಡೆಗೆ ಅತಿವೇಗವಾಗಿ ಬಂದ ವೆರ್ನಾ ಕಾರು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟು ೬ ಮಂದಿ ಗಾಯಗೊಂಡಿರುವ ದಾರುಣ ಘಟನೆ ನಗರದ ಹೊರವಲಯದ ದೇವನಹಳ್ಳಿ ಬಳಿಯ ಬೂದಿಗೆರೆ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ನಗರದ ಕಟ್ಟಿಗೊಲ್ಲಹಳ್ಳಿಯ ಕಿರಣ್ಕುಮಾರ್(೧೮) ಕೆಆರ್ಪುರಂನ ಚಾರ್ಲ್ಸ್(೧೯) ಮೃತಪಟ್ಟವರು,ಕೆಆರ್ಪುರಂನ ಶೇಷಾದ್ರಿ,ಕಿರಣ್,ಮಣಿಕುಮಾರ್ ಸೇರಿ ೬ ಮಂದಿ ಗಾಯಗೊಂಡಿದ್ದು ಅವರನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ,
ಕೆಆರ್ಪುರಂನ ಸಿಲಿಕ್ಯಾನ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮೃತ ಇಬ್ಬರು ಸೇರಿ ೮ ಮಂದಿ ವಿದ್ಯಾರ್ಥಿಗಳು ಕಾಲೇಜಿಗೆ ರಜೆಇದ್ದರಿಂದ ನಂದಿಬೆಟ್ಟಕ್ಕೆ ಮೋಜು ಮಾಡಲು ಬೆಳಿಗ್ಗೆ ೧೦.೩೦ ರವೇಳೆ ವೆರ್ನಾಕಾರಿನಲ್ಲಿ ದೇವನಹಳ್ಳಿ ಕಡೆಯಿಂದ ನಂದಿಬೆಟ್ಟಕ್ಕೆ ವೇಗವಾಗಿ ಚಲಾಯಿಸಿಕೊಂಡು ಹೋಗಿ ಆಯತಪ್ಪಿ ಬೂದಿಗೆರೆ ರಸ್ತೆಯ ಕೆಇಬಿ ಎಕ್ಸ್ಟೇಷನ್ ಬಳಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಇಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ,ಅಪಘಾತದಿಂದಾಗಿ ಬೂದಿಗೆರೆ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಧಾವಿಸಿರುವ ಚನ್ನರಾಯಪಟ್ಟಣ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.