ಕರ್ನಾಟಕ

ನಾಡಗೀತೆಯಿಂದ ಶಂಕರ, ರಾಮಾನುಜರ ಕೈಬಿಡಿ

Pinterest LinkedIn Tumblr

Bhagavan-550FFFಬೆಂಗಳೂರು: ನಾಡಗೀತೆಯಿಂದ ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯರ ಹೆಸರನ್ನು ತೆಗೆದುಹಾಕಬೇಕು ಎಂದು ವಿಮರ್ಶಕ ಪ್ರೊ. ಕೆ.ಎಸ್‌.ಭಗವಾನ್‌ ಹೇಳಿದ್ದಾರೆ. ನಗರದ ನಯನ ಸಭಾಂಗಣದಲ್ಲಿ ಅಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ನುಡಿಹಬ್ಬ ಮತ್ತು ಕದಂಬ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಗೀತೆಯಲ್ಲಿ ಶಂಕರಾಚಾರ್ಯ ಹಾಗೂ ರಾಮಾನುಜಾಚಾರ್ಯರನ್ನು ಉಲ್ಲೇಖ ಮಾಡಿರುವುದು ಸರಿಯಲ್ಲ. ನಾಡಿಗೆ ಇವರ ಕೊಡುಗೆ ಏನೂ ಇಲ್ಲ. ಹಾಗಾಗಿ, ನಾಡಗೀತೆಯಿಂದ ಇವರಿಬ್ಬರ ಹೆಸರನ್ನು ಕೈಬಿಡಬೇಕು ಎಂದು ಅಭಿಪ್ರಾಯಪಟ್ಟರು.

ಕುವೆಂಪು ಅವರ ವಿಶ್ವಮಾನವ ತತ್ವನ್ನು ಯಾರೂ ಮೈಗೂಡಿಸಿಕೊಂಡಿಲ್ಲ. ಪುರೋಹಿತರಿಲ್ಲದೆ ಮದುವೆಯಾಗಿ ಎಂಬ ಕರೆ ಕೊಟ್ಟಿದ್ದ ರಾಷ್ಟ್ರಕವಿ, ಹಿಂದು ಧರ್ಮದ ಅನಿಷ್ಟ ಪದ್ಧತಿಯ ಬಗ್ಗೆ ಕಿಡಿಕಾರಿದ್ದರು. ಕೊಳಕು ಕಂದಾಚಾರಗಳಿಗೆ ಕುವೆಂಪು ಎಂದಿಗೂ ಆಸ್ಪದ ನೀಡಿರಲಿಲ್ಲ. ಆದರೆ, ಅದನ್ನು ಯಾರೂ ಅಳವಡಿಸಿಕೊಂಡಿಲ್ಲ. ಅಷ್ಟೇ ಯಾಕೆ, ಸ್ವಾಮಿ ವಿವೇಕಾನಂದರನ್ನು ಕೂಡ ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಆದರೆ, ಕೇವಲ ಅವರ ಹೆಸರಿನಲ್ಲಿ ಭಜನೆ ಮಾಡುತ್ತಿದ್ದಾರೆ ಎಂದು ಹೇಳಿದರು.
-ಉದಯವಾಣಿ

Write A Comment