ಕರ್ನಾಟಕ

ಪ್ರಿಯಕರನ ಸಾವಿಗೆ ಮನನೊಂದು ಕಟ್ಟಡದಿಂದ ಜಿಗಿದು ಪ್ರಿಯತಮೆ ಆತ್ಮಹತ್ಯೆ

Pinterest LinkedIn Tumblr

Loveಬೆಂಗಳೂರು: ಪ್ರಿಯಕರನ ಅಗಲಿಕೆಯಿಂದ ಮನನೊಂದು ಒಬೆಲಿಸ್ಕ್ ಕಟ್ಟಡದ 10ನೇ ಮಹಡಿಯಿಂದ ಜಿಗಿದು ಪ್ರಿಯತಮೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ.

ಸಾಯುವ ಮುನ್ನ ಐ ಯಾಮ್ ಸಾರಿ ಎಂದು ಡೆತ್ ನೋಟ್ ಬರೆದಿಟ್ಟು ಒಬೆಲಿಸ್ಕ್ ಕಟ್ಟಡದ 10ನೇ ಮಹಡಿಯಿಂದ ಕೆಳಕ್ಕೆ ಹಾರಿ ಪೂಜಾ(24) ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ವಿವರ:
ಬಾಬಾ ಜಾಬ್ ಕಂಪನಿಯಲ್ಲಿ ಪೂಜಾ ಮತ್ತು ಚರಣ್ ಉದ್ಯೋಗ ಮಾಡುತ್ತಿದ್ದರು. ಒಂದೇ ಕಂಪನಿಯಲ್ಲಿದ್ದ ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಡಿಸೆಂಬರ್ 5ರಂದು ಹುಣಸಮಾರನಹಳ್ಳಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಚರಣ್ ಸಾವನ್ನಪ್ಪಿದ್ದ. ಚರಣ್ ನನ್ನು ಬಿಟ್ಟಿರಲಾರದೆ ಮನನೊಂದ ಪ್ರಿಯತಮೆ ಪೂಜಾ ಸೋಮವಾರ ಕಸ್ತೂರಬಾ ರಸ್ತೆಯಲ್ಲಿರುವ ಒಬೆಲಿಸ್ಕ್ ಕಟ್ಟಡದ 10ನೇ ಅಂತಸ್ತಿನಿಂದ ಕೆಳಗೆ ಜಿಗಿದು ಸಾವಿಗೆ ಶರಣಾಗಿದ್ದಳು.

ಪೂಜಾ ಸಾಯುವ ಮುನ್ನ, ಚರಣ್ ನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ, ಐ ಯಾಮ್ ಸಾರಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೂಜಾಳ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
-ಉದಯವಾಣಿ

Write A Comment