ಅಂತರಾಷ್ಟ್ರೀಯ

ಹೆಚ್ಚು ಭಾವನಾತ್ಮಕ ಸಂಬಂಧಗಳಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುವ ಸಾಧ್ಯತೆ

Pinterest LinkedIn Tumblr

testosterone

ನ್ಯೂಯಾರ್ಕ್: ಹೆಚ್ಚು ಭಾವನಾತ್ಮಕ ಸಂಬಂಧ ಹೊಂದುವುದು ಪುರುಷರಲ್ಲಿ ವಯಸ್ಸಾದಂತೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಕುಗ್ಗಿಸುತ್ತದೆ. ಪತ್ನಿಯೊಂದಿಗೆ ಮಾತ್ರವಲ್ಲ, ಒಡಹುಟ್ಟಿದವರು, ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ಭಾವನಾತ್ಮಕ ಸಂಬಂಧ ಹೊಂದುವುದೂ ಸಹ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುವುದರ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ.

ಸಂಶೋಧನಾ ತಂಡದಲ್ಲಿ ಭಾರತೀಯ ಮೂಲದ ವಿಜ್ಞಾನಿಯೂ ಇದ್ದು, ನೊಟ್ರೆ ಡೇಮ್ ವಿಶ್ವವಿದ್ಯಾನಿಲಯದಿಂದ ಮಾನವಶಾಸ್ತ್ರಜ್ಞರ ಪ್ರಕಾರ, ವಿವಾಹವಾಗದವರಿಗೆ ಹೋಲಿಸಿದರೆ ವಿವಾಹವಾದ ಪುರುಷರು ಮತ್ತು ತಂದೆಯಾದವರು ಸಾಮಾನ್ಯವಾಗಿ ಕಡಿಮೆ ಟೆಸ್ಟೋಸ್ಟೀರಾನ್ ನ್ನು ಹೊಂದಿರುತ್ತಾರಂತೆ. ಇದಕ್ಕೆ ಸಾಮಾಜಿಕ ಸಂಬಂಧಗಳು ಕಾರಣ ಎಂಬುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಲಾಗಿದೆ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲೀ ಟಿ. ಗೆಟ್ಲರ್ ಹೇಳಿದ್ದಾರೆ.

ಮಹಿಳೆಯರಾಗಲಿ, ಪುರುಷರಾಗಲಿ ಸಾಮಾಜಿಕ ಬೆಂಬಲದಿಂದ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಟೆಷ್ಟೋಸ್ಟೆರಾನ್ ಖಿನ್ನತೆ, ಹೃದ್ರೋಗ, ಬೊಜ್ಜು, ಕ್ಯಾನ್ಸರ್ ಅಪಾಯಗಳ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದ ಪುರುಷರಲ್ಲಿ  ಈ ಟೆಸ್ಟೋಸ್ಟೆರಾನ್ ಗೆ  ಪೂರಕವಾದ ಸಾಮಾಜಿಕ ಅಡ್ಡಪರಿಣಾಮಗಳ ಬಗ್ಗೆ ಗಂಭೀರವಾದ ಅಧ್ಯಯನ ನಡೆಯಬೇಕಿದೆ ಎಂದು ಮತ್ತೋರ್ವ ಸಹಾಯಕ ಪ್ರಾಧ್ಯಾಪಕ ರಾಹುಲ್ ಹೇಳಿದ್ದಾರೆ.

ಈ ಬಗೆಗೆಗಿನ ಅಧ್ಯಯನ ವರದಿ ಹಾರ್ಮೋನುಗಳು ಮತ್ತು ನಡವಳಿಕೆಗೆ ಸಂಬಂಧಿಸಿದ ಜರ್ನಲ್ ನ ಮುಂಬರುವ ಸಂಚಿಕೆಯಲ್ಲಿ ಪ್ರಕಟವಾಗಲಿದೆ.

Write A Comment