ಕರ್ನಾಟಕ

ಪುನೀತ್ ರಾಜಕುಮಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ‘ದೊಡ್ಮನೆ ಹುಡುಗ’ ! ಈ ಸಿನೆಮಾದ ವಿಶೇಷತೆ ಏನು…ಇಲ್ಲಿದೆ ನೋಡಿ..

Pinterest LinkedIn Tumblr

dodmane-huduga

ಬೆಂಗಳೂರು: ಈ ಸಿನೆಮಾದ ಘೋಷಣೆಯಾದಾಗಲಿಂದಲು ಸಿನೆರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಕಾರಣ ಒಂದು ಇದು ಪುನೀತ್ ರಾಜಕುಮಾರ್ ಅವರ 25 ನೆ ಚಿತ್ರ. ಮತ್ತು ಇದರ ನಿರ್ದೇಶಕ ಸೂರಿ. ಸಿನೆಮಾದ ಹೆಸರು ‘ದೊಡ್ಮನೆ ಹುಡುಗ’. ಚಿತ್ರರಸಿಕರು ಸಿನೆಮಾದ ಬಿಡುಗಡೆಯ ದಿನಾಂಕ ತಿಳಿಯಲು ಉತ್ಸುಕರಾಗಿರುವುದಂತೂ ನಿಜ.

ಪ್ರೇಕ್ಷಕರಿಗೆ ಸಿಹಿಸುದ್ದಿಯೆಂದರೆ ಚಿತ್ರೀಕರಣ ಮುಗಿಯಲು ಇನ್ನು 8 ದಿನಗಳಷ್ಟೇ ಬಾಕಿ ಉಳಿದಿರುವುದು. ಇದರ ನಂತರ ಕೆಲವು ಹಾಡುಗಳ ಚಿತ್ರೀಕರಣ ಇರುತ್ತದಂತೆ. “ನಾನು ಸದ್ಯಕ್ಕೆ ರವಿಶಂಕರ್ ಅವರ ಭಾಗವನ್ನು ಚಿತ್ರೀಕರಿಸಲು ಮೈಸೂರಿನಲ್ಲಿದ್ದೇನೆ. ಇದು ಒಂದು ವಾರ ನಡೆಯಲಿದ್ದು ನಂತರ ಹಾಡುಗಳ ಚಿತ್ರೀಕರಣ ಪ್ರಾರಂಭವಾಗುತ್ತದೆ” ಎನ್ನುತ್ತಾರೆ ಸೂರಿ.

ಇದೇ ಮೊದಲ ಬಾರಿಗೆ ಪುನೀತ್ ಎದುರು ಖಳನಟನಾಗಿ ರವಿಶಂಕರ್ ನಟಿಸುತ್ತಿರುವುದು. ಹಾಗೆಯೇ ಇದೇ ಮೊದಲ ಬಾರಿಗೆ ‘ದೊಡ್ಮನೆ ಹುಡುಗ’ನ ಮೂಲಕ ಅಂಬರೀಶ್ ಮತ್ತು ಪುನೀತ್ ಕೂಡ ಜೊತೆಗೆ ನಟಿಸುತ್ತಿದ್ದಾರೆ. ರಾಧಿಕಾ ಪಂಡಿತ್ ನಾಯನಟಿಯಾಗಿದ್ದು, ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್ ಮತ್ತು ಸುಮಲತಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ, ಸಂತೋಶ್, ಚಿಕ್ಕಣ್ಣ ಸಹನಟರು. ಸತ್ಯ ಹೆಗಡೆ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜೊತೆಜೊತೆಗೆ ಪುನೀತ್ ‘ಚಕ್ರವ್ಯೂಹ’ದ ಚಿತ್ರೀಕರಣ ಕೂಡ ಮುಗಿಸುತ್ತಿದ್ದಾರೆ.

Write A Comment