ಕರ್ನಾಟಕ

ಈಗ ನನಗೆ ಬುದ್ಧಿ ಬಂದಿದೆ.. ಕೋಪ ಒಳ್ಳೇದಲ್ಲ… ಎಕ್ಕಡ ಎಂಬ ಪದ ಬಳಸಲ್ಲ ಎಂದ ಹುಚ್ಚ ವೆಂಕಟ್

Pinterest LinkedIn Tumblr

huccha

ಬೆಂಗಳೂರು: ‘ಇಷ್ಟೆಲ್ಲಾ ಆದ ಮೇಲೆ ನನಗೆ ಈಗ ಬುದ್ಧಿ ಬಂದಿದೆ. ಕೋಪ ಒಳ್ಳೇದು ಅಲ್ಲ ಎಂದು ಗೊತ್ತಾಗಿದೆ’… ಹೀಗಂತ ಹೇಳಿದ್ದು ಬೇರ್ಯಾರು ಅಲ್ಲಾ, ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್.

ಇಂದು ಬೆಂಗಳೂರಿನಲ್ಲಿ ತಮ್ಮ ಮೊದಲ ಚಿತ್ರ ಹುಚ್ಚ ವೆಂಕಟ್ ಮರು ಬಿಡುಗಡೆ ಕುರಿತು ಸುದ್ಧಿಗೋಷ್ಠಿ ನಡೆಸಿದ ವೇಳೆ ಈ ರೀತಿ ಹೇಳಿಕೊಂಡಿದ್ದಾರೆ. ಈಗ ನನಗೆ ಬುದ್ಧಿ ಬಂದಿದೆ. ಕೋಪ ಒಳ್ಳೆಯದು ಅಲ್ಲ ಎಂದು ತಿಳಿದಿದೆ. ಇನ್ನು ಮುಂದೆ ಎಂದೂ ನಾನು ಎಕ್ಕಡ ಎಂಬ ಪದ ಬಳಸಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್ 18ರಂದು ತಮ್ಮ ಮೊದಲ ಚಿತ್ರ ಹುಚ್ಚ ವೆಂಕಟ್ ರಾಜ್ಯಾದ್ಯಂತ ಮತ್ತೆ ತೆರೆ ಕಾಣಲಿದ್ದು, ಚಿತ್ರ ಬಿಡುಗಡೆ ಜವಾಬ್ದಾರಿಯನ್ನು, ಆರ್ಯ ಮೌರ್ಯ ಎಂಟರ್ ಪ್ರೈಸಸ್ ನ ವಿತರಕರು ತೆಗೆದುಕೊಂಡಿದ್ದಾರೆ. ಅಲ್ಲದೇ, ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆಗೆ ಚಿಂತನೆ ನಡೆಸಲಾಗಿದೆ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ.

Write A Comment