ಕನ್ನಡ ವಾರ್ತೆಗಳು

ಬಿನ್ನ ಸಾಮರ್ಥ್ಯದ ಮಕ್ಕಳ “ದಿ ಸ್ಪೆಷಲ್ ಟ್ಯಾಲೆಂಟ್ ಹಂಟ್ -2015” ಜಾನಪದ ನೃತ್ಯ ಸ್ಪರ್ಧೆ.

Pinterest LinkedIn Tumblr

Sahnidya_town_hall_1

ಮಂಗಳೂರು,ಡಿ.08: ಮಂಗಳೂರು ಮಾನಸಿಕ ಭಿನ್ನ ಸಾಮಾರ್ಥ್ಯ ಮಕ್ಕಳ ವಸತಿ ಶಾಲೆ ಹಾಗೂ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಇದರ ಜಂಟಿ ಅಶ್ರಯದಲ್ಲಿ ಎರಡು ದಿನಗಳ ರಾಜ್ಯಮಟ್ಟದ “ದಿ ಸ್ಪೆಷಲ್ ಟ್ಯಾಲೆಂಟ್ ಹಂಟ್ -2015” ಜಾನಪದ ನೃತ್ಯ ಸ್ಪರ್ಧೆಯು ನಗರದ ಪುರಭವನದಲ್ಲಿ ಆಯೋಜಿಸಲಾಗಿತ್ತು. ಇದರ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ ರಮಾನಾಥ ರೈ ಜಿಲ್ಲಾ ನೇರವೇರಿಸಿದರು.

ಬಳಿಕ ಮಾತನಾಡಿದ ಅವರು ಭಿನ್ನ ಸಾಮಾರ್ಥ್ಯ ಮಕ್ಕಳ ಮನಸ್ಸಿನಲ್ಲಿರುವ ನೋವುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ, ಅಂತಹ ಮಕ್ಕಳಲ್ಲಿರುವ ಕಲೆಯನ್ನು ಹಾಗೂ ಅವರಲ್ಲಿರುವ ಕಿಳರಿಮೆಯನ್ನು ಹೊಗಲಾಡಿಸಲು ಇದು ಒಂದು ಉತ್ತಮ ಪ್ರಯತ್ನ ಎಂದು ಅವರು ಹೇಳಿದರು.

Sahnidya_town_hall_2 Sahnidya_town_hall_3 Sahnidya_town_hall_4 Sahnidya_town_hall_5 Sahnidya_town_hall_6 Sahnidya_town_hall_7 Sahnidya_town_hall_8 Sahnidya_town_hall_9 Sahnidya_town_hall_10Sahnidya_town_hall_11 Sahnidya_town_hall_12 Sahnidya_town_hall_13 Sahnidya_town_hall_14 Sahnidya_town_hall_15 Sahnidya_town_hall_16 Sahnidya_town_hall_17 Sahnidya_town_hall_18 Sahnidya_town_hall_19

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಮಾನಸಿಕ ಹಾಗೂ ಭಿನ್ನ ಸಾಮಾರ್ಥ್ಯಕ್ಕೆ ಒಳಪಟ್ಟ ಮಕ್ಕಳಿಗೆ ನಾವು ಪ್ರೀತಿ, ಅನುಕಂಪ, ಸಹಾನುಭೂತಿ ಯನ್ನು ತೋರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹಾಬಲ ಮಾರ್ಲ, ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

Write A Comment