ಕರ್ನಾಟಕ

ಪತ್ನಿ ಬಗ್ಗೆ ಗುಣಗಾನ ಮಾಡಿದ ನಟ ಪ್ರಜ್ವಲ್ ದೇವರಾಜ್ ಏನಂದರು ಗೊತ್ತಾ…? ಇಲ್ಲಿದೆ ಓದಿ…

Pinterest LinkedIn Tumblr

praj

ಬೆಂಗಳೂರು: ತಮ್ಮ ಬಹುಕಾಲದ ಗೆಳತಿ ರಾಗಿಣಿ ರಾಮಚಂದ್ರನ್ ಅವರೊಂದಿಗೆ ವಿವಾಹವಾದ ನಟ ಪ್ರಜ್ವಲ್ ದೇವರಾಜ್ ಹನಿಮೂನ್ ಕೂಡ ಮುಗಿಸಿ ಈಗ ಕೆಲಸಕ್ಕೆ ಹಿಂದಿರುಗಿದ್ದಾರೆ. ಜೀವಾ ನಿರ್ದೇಶನದ ‘ಭುಜಂಗ’ದ ಎರಡು ಹಾಡುಗಳ ಚಿತ್ರೀಕರಣವನ್ನು ಮುಗಿಸಿದ್ದಾರೆ. “ಮೊದಲಿಗೆ ಈ ಹಾಡುಗಳನ್ನು ಮಲೇಶಿಯಾ ಮತ್ತು ಶ್ರೀಲಂಕಾದಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದರು. ಆದರೆ ಅಲ್ಲಿ ಮಳೆಯಾಗುತ್ತಿದ್ದರಿಂದ ಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಸಂಪೂರ್ಣಗೊಂಡಿತು. ‘ಮಾದ ಮತ್ತು ಮಾನಸಿ’ ಸಿನೆಮಾ ತಂಡವನ್ನು ಡಿಸೆಂಬರ್ 20ಕ್ಕೆ ಸೇರಲಿದ್ದೇನೆ” ಎನ್ನುತ್ತಾರೆ.

ಮದುವೆಯ ನಂತರ ಮೊದಲ ಬಾರಿಗೆ ಸಿಟಿ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಪ್ರಜ್ವಲ್, ಮದುವೆಯಿಂದ ತಾವಾಗಲಿ ಅಥವಾ ಪತ್ನಿ ರಾಗಿಣ ಆಗಲಿ ಬದಲಾಗಿಲ್ಲ ಎನ್ನುತ್ತಾರೆ. “ಈಗಲೂ ನನ್ನ ಗೆಳೆಯರೊಂದಿಗೆ ಮಾತನಾಡುವಾಗ, ಅವಳನ್ನು ನನ್ನ ಗರ್ಲ್ ಫ್ರೆಂಡ್ ಎಂದೇ ಹೇಳುತ್ತೇನೆ. ಒಂದೇ ವ್ಯತ್ಯಾಸ ಎಂದರೆ ಇಬ್ಬರೂ ಒಟ್ಟಿಗೆ ಬದುಕುತ್ತಿದ್ದೇವೆ. ನಮ್ಮಿಬ್ಬರಿಗೂ ಸುಮಾರ್ 45 ಜನ ಸಾಮಾನ್ಯ ಗೆಳೆಯರಿದ್ದಾರೆ. ಅವರೊಂದಿಗೆ ಅತಿ ಹೆಚ್ಚಿನ ಸಮಯ ಕಳೆಯುತ್ತೇವೆ” ಎನ್ನುತ್ತಾರೆ ಪ್ರಜ್ವಲ್.

ತಮ್ಮ ಸಿನೆಮಾ ವೃತ್ತಿ ಜೀವನದ ಬಗೆಗಿನ ರಾಗಿಣಿ ಸಂಬಂಧವನ್ನು ವಿವರಿಸುವ ಪ್ರಜ್ವಲ್ “ನಾನು ಕೈಗೆತ್ತಿಕೊಳ್ಳುವ ಸಿನೆಮಾವನ್ನು ಯಾವಾಗಲೂ ಅವಳೊಂದಿಗೆ ಚರ್ಚಿಸುತ್ತೇನೆ. ನನ್ನ ವೃತ್ತಿಜೀವನದ ಎಲ್ಲ ವಿವರಗಳು ಅವಳಿಗೆ ಗೊತ್ತು ಮತ್ತು ಹಲವಾರು ಬಾರಿ ನನಗೆ ಸಲಹೆ ಸೂಚನೆಗಳನ್ನು ನೀಡಿದ್ದಾಳೆ” ಎಂದು ತಿಳಿಸುತ್ತಾರೆ ಪ್ರಜ್ವಲ್.

‘ಭುಜಂಗ’ ಮತ್ತು ‘ಮಾದ ಮತ್ತು ಮಾನಸಿ’ ಚಿತ್ರದ ಬಳಿಕ ತರುಣ್ ಸುಧೀರ್ ಅವರ ಬಹುತಾರಾಗಣದ ‘ಚೌಕ’ದಲ್ಲಿ ನಟಿಸಲಿದ್ದಾರೆ. “ಇನ್ನು ಚಿತ್ರೀಕರಣಕ್ಕೆ ಸಮಯವಿದೆ. ನನ್ನ ಜೊತೆಗೆ ಪ್ರೇಮ್, ದಿಗಂತ್ ಮತ್ತು ಚಿರಂಜೀವಿ ಸರ್ಜಾ ನಟಿಸಲಿದ್ದಾರೆ. ನಾವೆಲ್ಲರೂ ಹೀರೋಗಳಾಗಿದ್ದರೂ ಒಳ್ಳೆಯ ಸ್ಕ್ರಿಪ್ಟ್ ನಿಂದ ಒಟ್ಟಾಗಿದ್ದೇವೆ” ಎನ್ನುತ್ತಾರೆ ಪ್ರಜ್ವಲ್.

Write A Comment