ರಾಷ್ಟ್ರೀಯ

ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತದಿಂದ 7.30 ಲಕ್ಷ ಟನ್ ಮಾಂಸ ರಫ್ತು

Pinterest LinkedIn Tumblr

meat

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತ 2,339.60 ದಶಲಕ್ಷ ಡಾಲರ್ ಮೌಲ್ಯದ 7.30 ಲಕ್ಷ ಟನ್ ಮಾಂಸ ರಫ್ತು ಮಾಡಿದೆ.

ಈ ಸದ್ಯಕ್ಕೆ ಗೋಮಾಂಸ ರಫ್ತು ನಿಷೇಧಿಸುವ ಉದ್ದೇಶವೂ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ. ಕಳೆದ ಹಣಕಾಸು ಸಾಲಿನಲ್ಲಿ ಭಾರತ 15 ಲಕ್ಷ ಟನ್ ಮಾಂಸ ರಫ್ತು ಮಾಡಿದ್ದು ಇದರ ಮೌಲ್ಯ 4,919.62 ದಶಲಕ್ಷ ಡಾಲರ್‍ಗಳಾಗಿವೆ.

ಈ ಬಾರಿ ಸರ್ಕಾರ ರಫ್ತು ಗುರಿ ನಿಗದಿ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದು, ಬೀಫ್ ಹೊರತಾದ ಮಾಂಸ ಮತ್ತು ಮಾಂಸದ ಉತ್ಪನ್ನಗಳ ರಫ್ತಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಿದರು.

Write A Comment