ಕರ್ನಾಟಕ

ಕರ್ನಾಟಕ ಸರ್ಕಾರದ ಪ್ರಯತ್ನದಿಂದ ಕೊನೆಗೂ ಪ್ರವಾಹ ಪರಿಹಾರ ಸ್ವೀಕರಿಸಿದ ಜಯ ಲಲಿತರ ತಮಿಳುನಾಡು ಸರಕಾರ

Pinterest LinkedIn Tumblr

siddu-jaya

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ನೆರವು ಬೇಡ ಎಂದು ತಮಿಳುನಾಡು ಹೇಳಿದ್ದು ನಿಜ. ನಂತರ ಸರ್ಕಾರ ಮತ್ತೆ ಪ್ರಯತ್ನ ಮಾಡಿದಾಗ ಎಲ್ಲಾ ರೀತಿಯ ಸೌಲಭ್ಯಗಳನ್ನು ಸ್ವೀಕರಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ರು.5 ಕೋಟಿ ನೆರವು ಘೋಷಿಸಿದ್ದಾರೆ. ಜತೆಗೆ ಬೇಡಿಕೆಗೆ ತಕ್ಕಂತೆ ಹಾಲಿನ ಪುಡಿ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಲ್ಲದೆ 50,000 ರಗ್ಗುಗಳನ್ನೂ ಕೇಳಿದ್ದು, ಅದನ್ನೂ ಪೂರೈಸಲಾಗುತ್ತಿದೆ. ಆದರೆ, ಅಲ್ಲಿನ ಹೊಂದಾಣಿಕೆ ಸಮಸ್ಯೆಯಿಂದಲೋ ಏನೋ ಪರಿಹಾರ ಸಾಮಗ್ರಿಗಳನ್ನು ಎಲ್ಲಿ ಯಾವ ರೀತಿ ನೀಡಬೇಕೆನ್ನುವ ಬಗ್ಗೆ ಗೊಂದಲವಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಫೋಟೊ ರಾಜಕಾರಣದಲ್ಲಿ ಆಸಕ್ತಿಯಿಲ್ಲ: ರಾಜ್ಯದಿಂದ ಹೊಗುತ್ತಿರುವ ಸಾಮಗ್ರಿಗಳಿಗೆ ಜಯಲಲಿತಾ ಫೋಟೋ ಹಾಕುತ್ತಿರಬಹುದು. ಅದಕ್ಕೆ ಬಗ್ಗೆ ನಾವು ಆಸಕ್ತಿ ವಹಿಸುವುದಿಲ್ಲ. ಬದಲಾಗಿ ಅಲ್ಲಿನ ಸಂತ್ರಸ್ತರಿಗೆ ನೆರವಾಗುತ್ತಿದ್ದೇವೆ. ನೆರವು ನೀಡುವುದಕ್ಕಾಗಿಯೇ 1070 ಸಂಖ್ಯೆ ಸಹಾಯವಾಣಿ ತೆರೆಯಲಾಗಿದೆ. ಅದಕ್ಕೆ ಕರೆಗಳು ಬರುತ್ತಿದ್ದು, ಅದಕ್ಕೆ ಸ್ಪಂದಿಸಿ ನೆರವು ಒದಗಿಸಲಾಗುತ್ತಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

Write A Comment