ಕರ್ನಾಟಕ

ಅಣ್ಣ-ತಂಗಿಯನ್ನು ಬೇರೆ ಮಾಡಿದ ಬಿಗ್ ಬಾಸ್ ! ಬಿಗ್‍ಬಾಸ್ ಮನೆಯಿಂದ ಹೊರಹೋಗುವಾಗ ಅಣ್ಣ ರೆಹಮಾನ್ ಗೆ ತಂಗಿ ನೀಡಿದ ಪನಿಶ್‍ಮೆಂಟ್ ಏನು ?

Pinterest LinkedIn Tumblr

rehman-neha

ಬೆಂಗಳೂರು: ಕಳೆದ 5 ವಾರಗಳಿಂದಲೂ ಸತತವಾಗಿ ನಾಮಿನೇಟ್ ಆಗುತ್ತಿದ್ದ ನೇಹಾ ಈ ಬಾರಿ ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್‍ಬಾಸ್ ಮನೆಗೆ ಪ್ರವೇಶ ಮಾಡಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಮನೆಯವರು ನೇಹಾರನ್ನು ನಾಮಿನೇಟ್ ಮಾಡುತ್ತಿದ್ದರು. ಆದರೆ ಪ್ರತಿ ಬಾರಿಯೂ ನೇಹಾರ ಅದೃಷ್ಟ ಅವರನ್ನು ಕಾಪಾಡುತ್ತಿತ್ತು. ಈ ನಡುವೆ ನೇಹಾ ಮತ್ತು ರೆಹಮಾನ್ ಅವರ ವಿಷಯವನ್ನು ಕಾರಣವಾಗಿಸಿಕೊಂಡು ಮನೆಯವರು ಇಬ್ಬರನ್ನೂ ಓಪನ್ ನಾಮಿನೇಷನ್ ಮಾಡಿದ್ದರು.

ಆದರೆ ಈ ಬಾರಿ ನಿರೀಕ್ಷೆಯಂತೆ ನೇಹಾ ಎಲಿಮಿನೇಟ್ ಆಗಿದ್ದಾರೆ. ಹಾಗೆ ರೆಹಮಾನ್ ಅಣ್ಣ ಅಭಿಮಾನಿಗಳ ಮತಗಳಿಂದ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮನೆಯಿಂದ ಹೊರಡುವಾಗ ನೇಹಾ ತಮಗೆ ಕೊಟ್ಟಿದ್ದ ವಿಶೇಷ ಅಧಿಕಾರದಿಂದ ರೆಹಮಾನ್ ಅಣ್ಣನಿಗೆ ನೀರು ಮತ್ತು ಅನ್ನ ಬಿಟ್ಟು ಬೇರೆ ಯಾವುದೇ ಆಹಾರ ಪದಾರ್ಥ ಸೇವಿದಂತೆ ಪನಿಶ್‍ಮೆಂಟ್ ನೀಡಿ ಹೋದರು.

ಇಷ್ಟು ದಿನ ರೆಹಮಾನ್ ಅವರು ತಂಗಿ ನೇಹಾರೊಂದಿಗೆ ತಮ್ಮದೇ ಲೋಕದಲ್ಲಿ ಇರುತ್ತಿದ್ದರು ಎಂದು ಮನೆಯವರು ಆರೊಪಿಸುತ್ತಿದ್ದರು. ಇನ್ನು ಮುಂದಾದರೂ ಮನೆಯವರ ಬಯಕೆಯಂತೆ ಅವರು ಇತರ ಸ್ಪರ್ಧಿಗಳೊಂದಿಗೆ ಹೆಚ್ಚಾಗಿ ಒಡನಾಟ ಬೆಳೆಸಿಕೊಳ್ಳುತ್ತಾರಾ ಇಲ್ಲವಾ ಎಂದು ಕಾದು ನೋಡಬೇಕು.

Write A Comment