ರಾಷ್ಟ್ರೀಯ

ಭೂಗತ ಪಾತಕಿ ಛೋಟಾ ರಾಜನ್ ಗೆ ಔಷಧಿಗಳನ್ನು ತಿಹಾರ್ ಅಧಿಕಾರಿಗಳಿಗೆ ಒಪ್ಪಿಸಿ: ಸಿಬಿಐಗೆ ಹೈ ಕೋರ್ಟ್ ಸೂಚನೆ

Pinterest LinkedIn Tumblr

rajan

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಗೆ ಸಂಬಂಧಿಸಿದ ಎಲ್ಲಾ ಔಷಧಿಗಳನ್ನು ತಿಹಾರ್ ಜೈಲಿನ ಅಧಿಕಾರಿಗಳಿಗೆ ಒಪ್ಪಿಸಬೇಕೆಂದು ದೆಹಲಿ ಹೈ ಕೋರ್ಟ್ ಸಿಬಿಐ ಅಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿದೆ.

ಇಂಡೋನೇಷ್ಯಾದಿಂದ ಗಡಿಪಾರು ಮಾಡಿದ ರಾಜನ್ ಅವರನ್ನು ಅಧಿಕಾರಿಗಳಿ ಹಸ್ತಾಂತರ ಮಾಡಲಾಗಿತ್ತು. ಈ ವೇಳೆ ರಾಜನ್ ಗೆ ಸಂಬಂಧಿಸಿದ ವಸ್ತು ಹಾಗೂ ಔಷಧಿಗಳನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ತನಿಖೆಗೆ ರಾಜನ್ ಗೆ ಸಂಬಂಧಿಸಿದ ಔಷಧಿಗಳು ಹಾಗೂ ಬ್ಯಾಗ್ ನಿಂದ ಯಾವುದೇ ಅಗತ್ಯವಿಲ್ಲವಿರುವುದರಿಂದ ಔಷಧಿಗಳನ್ನು ಸಿಬಿಐ ಅಧಿಕಾರಿಗಳು ಮರಳಿ ನೀಡುವಂತೆ ರಾಜನ್ ಅವರ ಪರವಕೀಲ ನ್ಯಾಯಾಲಯದ ಬಳಿ ಮನವಿ ಮಾಡಿದ್ದರು.

ಈ ಮನವಿಯನ್ನು ಪರಿಶೀಲಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಕುಮಾರ್ ಅವರು, ರಾಜನ್ ಗೆ ಸಂಬಂಧಿಸಿದ ಔಷಧಿಗಳನ್ನು ಜೈಲಿನ ಅಧಿಕಾರಿಗಳಿಗೆ ಒಪ್ಪಿಸುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಅಕ್ಟೋಬರ್ 25ರಂದು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದರು. ಇದೀಗ ರಾಜನ್ ಸಿಬಿಐ ಅಧಿಕಾರಗಳ ವಶದಲ್ಲಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Write A Comment