ಮುಂಬೈ

ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ: 155 ಪ್ರಕರಣ,300 ಮಂದಿಗೆ ಶಿಕ್ಷೆ

Pinterest LinkedIn Tumblr

beef ban

ಮುಂಬೈ: ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ ಕಾನೂನಿನಡಿಯಲ್ಲಿ 300 ಮಂದಿ ಶಿಕ್ಷೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ. ಎಂಟು ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧ ಕಾನೂನು ಜಾರಿಗೆ ಬಂದಿತ್ತು.

ನಿಯಮ ಜಾರಿಗೆ ಬಂದ ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಪ್ರಾಣಿ ಸಂರಕ್ಷಣಾ ನಿಯಮ ಪ್ರಕಾರ 155ರಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 300 ಮಂದಿಗೆ ಶಿಕ್ಷೆಯೂ ಆಗಿದೆ.

ದನಗಳ ಕಳ್ಳ ಸಾಗಾಣಿಕೆ ಮತ್ತು ಗೋ ಹತ್ಯೆ ಮಾಡಿರುವುದರ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಕೇಸು ದಾಖಲಾಗಿದೆ. ಈ ನಿಯಮ ಪ್ರಕಾರ ಗೋಮಾಂಸವನ್ನು ಸಂಗ್ರಹಿಸಿಟ್ಟಿದ್ದರೆ 1 ವರ್ಷ ಜೈಲು ಮತ್ತು 2000 ರು. ದಂಡ ವಿಧಿಸಲಾಗುತ್ತದೆ.

Write A Comment