ಕರ್ನಾಟಕ

ಚೆನ್ನೈ ನೆರೆ ಹಾವಳಿ ಸಂತ್ರಸ್ತರಿಗೆ ಶಿವಣ್ಣ-ಸುದೀಪ್ ಚಿತ್ರತಂಡದಿಂದ ನೆರವು

Pinterest LinkedIn Tumblr

SUDEEP SHIVANNA

ಬೆಂಗಳೂರು: ನೆರೆ ಹಾವಳಿಯಿಂದ ತತ್ತರಿರಿಸಿರುವ ತಮಿಳು ನಾಡಿಗೆ ಜೋಗಿ ಪ್ರ್ರೇಮ್ ಹಾಗೂ ನಿರ್ಮಾಪಕ ಸಿ.ಅರ್ ಮನೋಹರ್ ನೆರವು ನೀಡಿದ್ದಾರೆ. ಇಂದು ಸಿಎಂ ಗೃಹಕಛೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರೇಮ್ ಹಾಗೂ ಮನೋಹರ್ 10 ಲಕ್ಷ ರುಪಾಯಿ ಚೆಕ್ ಹಸ್ತಾಂತರಿಸಿದರು.

ಅಂದಹಾಗೆ ಇದು ಶಿವಣ್ಣ-ಸುದೀಪ್ ನಟನೆಯ ಇನ್ನಷ್ಟೇ ಸೆಟ್ಟೇರಬೇಕಿರುವ ಚಿತ್ರತಂಡದ ನೆರವು. ಸದ್ಯ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಚಿತ್ರದ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮಹೋನ್ನತ ಚಿತ್ರದ ಟೈಟಲ್ ಲಾಂಚ್‍ಗೆ ಹಲವು ಮಹನೀಯರು ಸಾಕ್ಷಿಯಾಗಲಿದ್ದಾರೆ.

ಟಾಲಿವುಡ್, ಬಾಲಿವುಡ್, ಕಾಲಿವುಡ್‍ನ ಸಿನಿತಾರೆಯರಲ್ಲದೆ, ರಾಜಕೀಯ ನೇತಾರರು ಮಹತ್ವದ ಕ್ಷಣದಲ್ಲಿ ಪಾಲ್ಗೊಳ್ಳಿಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಚಿತ್ರತಂಡ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಕಾರ್ಯಕ್ರಮ ಡಿಸೆಂಬರ್ 13ರಂದು ಅದ್ಧೂರಿಯಾಗಿ ಜರುಗಲಿದ್ದು, ಈ ಚಿತ್ರ 110 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

Write A Comment