ಕರ್ನಾಟಕ

ಬಿಗ್ ಬಾಸ್‍ನಲ್ಲಿ ಅಯ್ಯಪ್ಪಗೆ ಒಲಿದು ಬಂದ ಕ್ಯಾಪ್ಟನ್ ಭಾಗ್ಯ…! ನೇತ್ರಾಳನ್ನು ಬದಲಿಸಿದ್ದು ಏಕೆ ?

Pinterest LinkedIn Tumblr

ayyappa-netra

ಬೆಂಗಳೂರು: ತನಗಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸದ ಕಾರಣಕ್ಕೆ ಕನ್ನಡದ ಬಿಗ್ ಬಾಸ್‍ನಲ್ಲಿ ನಿನ್ನೆ ವಾರದ ಕ್ಯಾಪ್ಟನನ್ನು ದಿಢೀರ್ ಬದಲಾವಣೆ ಮಾಡಲಾಯಿತು. ಬಿಗ್‍ಬಾಸ್ ಮನೆಯ ಈ ವಾರದ ಹೊಸ ಕ್ಯಾಪ್ಟನ್ ಆಗಿ ಅಯ್ಯಪ್ಪ ಅವರ ಹೆಸರು ಘೋಷಣೆಯಾಯಿತು.

ಇಷ್ಟು ದಿನ ಅಯ್ಯಪ್ಪ ತಾವು ಕೂಡ ಮನೆಯ ಕ್ಯಾಪ್ಟನ್ ಆಗಬೇಕು ಎಂಬ ಹಂಬಲವನ್ನು ಹೊಂದಿದ್ದರು. ಇದೀಗ ಅವರ ಅದೃಷ್ಟವೇನೋ ಎಂಬಂತೆ ಆಯ್ಕೆ ಪ್ರಕ್ರಿಯೆ ನಡೆಯದೆ ಅವರೇ ಈ ವಾರದ ಮನೆಯ ಕ್ಯಾಪ್ಟನ್ ಎಂದು ಸ್ವತಃ ಬಿಗ್‍ಬಾಸ್ ಘೋಷಿಸಿದ್ದಾರೆ.

ಈ ವಾರದ ಕ್ಯಾಪ್ಟನ್ ಎಂದು ಈಗಾಗಲೇ ಆಯ್ಕೆಯಾಗಿದ್ದ ನೇತ್ರಾ ಕನ್‍ಫೆಷನ್ ರೂಮಿನಲ್ಲಿ ನಡೆದ ಸಂಭಾಷಣೆಯನ್ನು ಮನೆಯವರೊಂದಿಗೆ ಚರ್ಚಿಸಿದ ಕಾರಣ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ವಜಾಗೊಳಿಸಿಲಾಯಿತು. ಆದ್ದರಿಂದ ಕಳೆದ ಬಾರಿ ಕ್ಯಾಪ್ಟನ್ ಆಯ್ಕೆಯಲ್ಲಿ ಸಮಾನ ಮತಗಳನ್ನು ಪಡೆದಿದ್ದ ಅಯ್ಯಪ್ಪ ಈಗ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಈ ಹೊಸ ಕ್ಯಾಪ್ಟನ್ ಕ್ರಿಕೆಟ್‍ನಲ್ಲಿರುವಂತೆ ಬಿಗ್‍ಬಾಸ್‍ನಲ್ಲೂ ತಮ್ಮ ನಾಯಕತ್ವದಲ್ಲಿ ಟಾಸ್ಕನ್ನು ಯಶಸ್ವಿಯಾಗಿ ನಿಭಾಯಿಸುತ್ತಾರಾ ಅನ್ನೋದಷ್ಟೇ ಸದ್ಯದ ಕುತೂಹಲ.

Write A Comment