ಕರ್ನಾಟಕ

ಲೋಕಾಯುಕ್ತ ಪದಚ್ಯುತಿ: ಸಮಿತಿ ರಚನೆಗೆ ಮನವಿ

Pinterest LinkedIn Tumblr

kagodu_____ಬೆಂಗಳೂರು,ನ.29: ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿರುವ ಲೋಕಾಯುಕ್ತ ಮತ್ತು ಉಪ ಲೋಕಾ ಯುಕ್ತ ನ್ಯಾಯಮೂರ್ತಿಗಳ ‘ಪದಚ್ಯುತಿ’ ವಿಚಾರ ಸಂಬಂಧ ವಾರದೊಳಗೆ ತನಿಖೆಗೆ ಸಮಿತಿಯನ್ನು ರಚಿಸುವಂತೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿಗೆ ಮನವಿ ಸಲ್ಲಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಲೋಕಾಯುಕ್ತ ಮತ್ತು ಉಪ ಲೋ ಕಾಯುಕ್ತರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ ನಡೆಯುತ್ತಿದ್ದು, ಈ ಕುರಿತು ಮುಖ್ಯನ್ಯಾಯಮೂರ್ತಿಗಳಿಗೆ ವಾರದಲ್ಲಿ ಪತ್ರ ಬರೆದು ತನಿಖೆ ನಡೆಸು ವಂತೆ ಕೋರಲಾಗುವುದು ಎಂದರು. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿಗೆ ಆರೋಪ- ಪ್ರತ್ಯಾರೋಪಗಳು ಕೇಳಿ ಬರುವುದು ಸಹಜ. ಇದಕ್ಕೆ ಸಂಬಂಧಿಸಿದಂತೆ ದಾಖಲೆ ಗಳ ಪರಿಶೀಲನೆ ನಡೆಯುತ್ತಿದೆ. ಪೂರಕ ದಾಖಲೆಗಳು ಇವೆಯೋ ಇಲ್ಲವೋ ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪ ಡಿಸಿದರು.
ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರ ಪದಚ್ಯುತಿಗೆ ಬಿಜೆಪಿ ಮತ್ತು ಜೆಡಿಎಸ್ ಸಭಾಪತಿ ಮತ್ತು ನನಗೆ ಮನವಿ ಸಲ್ಲಿಸಿದ್ದು, ಲೋಕಾಯುಕ್ತರ ಪದಚ್ಯುತಿಗೆ ಕೋರಿದ್ದರು. ಆ ಹಿನ್ನೆಲೆಯಲ್ಲಿ ಪದಚ್ಯುತಿ ನಿರ್ಣಯವನ್ನು ವಿಧಾನ ಮಂಡಲದಲ್ಲಿ ಅಂಗೀಕರಿಸಲಾಗಿದೆ ಎಂದರು.
ಅದರ ಬೆನ್ನಲ್ಲೇ ವಿಧಾನ ಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ 75 ಶಾಸಕರು ಉಪ ಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ಅವರನ್ನು ಭ್ರಷ್ಟಾ ಚಾರದ ಆರೋಪದ ಮೇಲೆ ಪದಚ್ಯುತಿಗೊಳಿಸುವಂತೆ ದೂರು ಸಲ್ಲಿಸಿದರು. ಅದನ್ನು ಕೂಡ ಅಂಗೀಕರಿಸಿದ್ದೇನೆ. ಆ ಹಿನ್ನೆಲೆಯಲ್ಲಿ ಈ ಸಂಬಂಧ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Write A Comment