ಕರ್ನಾಟಕ

ಲಿಂಗರಾಜಪುರದಲ್ಲಿ ಗೋದಾಮಿಗೆ ಬೆಂಕಿ

Pinterest LinkedIn Tumblr

Fire tenders examining the situation at the GN Marketing godown at Lingarajapuram after a fire breakdown was reported due to short-circuit in Bengaluru on Sunday Nov 22 2015. No casualties was reported - KPN ### Fire at a gowdown in Lingarajapuram

ಬೆಂಗಳೂರು, ನ. 22: ಕಾಟನ್ ಬಾಕ್ಸ್‌ಗಳನ್ನು ಶೇಖರಿಸಿಟ್ಟಿದ್ದ ಗೋಡಾನ್‌ಗೆ ರವಿವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ಮೌಲ್ಯದ ಕಾಟನ್ ಬಾಕ್ಸ್‌ಗಳು ಬೆಂಕಿಗಾಹುತಿಯಾದ ಘಟನೆ ಲಿಂಗರಾಜಪುರದ 7ನೆ ಕ್ರಾಸ್‌ನಲ್ಲಿ ಸಂಭವಿಸಿದೆ.

ಸಿದ್ದ್ಧಾರ್ಥ ಫ್ರೌಡಶಾಲೆಯ ಬಳಿಯಿರುವ ಗೋಡಾನ್‌ಗೆ ಬೆಳಗ್ಗೆ 10ಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಗಲಿದ ಆಕಸ್ಮಿಕ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗೋದಾಮು ಆವರಿಸಿದೆ.

ಬೆಂಕಿಯಿಂದ ದಟ್ಟ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಗೋದಾಮಿನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

Write A Comment