ಕರ್ನಾಟಕ

ಮದುವೆಯಾಗಿರುದನ್ನು ಮುಚ್ಚಿಟ್ಟ ಹುಚ್ಚ ವೆಂಕಟ್ ! ಈಗ ಪತ್ನಿ ಎಲ್ಲಿದ್ದಾಳೆ..? ಮದುವೆಯ ರಹಸ್ಯ ಏನು..?

Pinterest LinkedIn Tumblr

huccha

ಬೆಂಗಳೂರು: ಹುಚ್ಚ ವೆಂಕಟ್ ಮುಖಕ್ಕೆ ಮಸಿ ಬಳಿದಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಹುಚ್ಚ ವೆಂಕಟ್ ಅವರ ಅಸಲಿ ಜಾತಕ ಹೊರಬೀಳತೊಡಗಿದೆ. ಹೌದು ತನಗೆ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಗೌರವ, ತನಗೆ ಮದುವೆಯಾಗಿಲ್ಲ ಎಂದೇ ಹೇಳುತ್ತಿದ್ದ ಹುಚ್ಚ ವೆಂಕಟ್ ಅವರು 2007ರಲ್ಲೇ ಮದುವೆಯಾಗಿರುವ ವಿಷಯ ಈಗ ಈಟಿವಿ ಖಾಸಗಿ ಟಿವಿ ಚಾನೆಲ್ ಬಯಲು ಮಾಡಿದೆ.

huccha1

ಈಟಿವಿ ನ್ಯೂಸ್ ಗೆ ಹುಚ್ಚ ವೆಂಕಟ್ ಮದುವೆಯಾದ ಫೋಟೋಗಳು ಸಿಕ್ಕಿವೆ ಎಂದು ಸುದ್ದಿ ಬಿತ್ತರಿಸಿದೆ. ಅಷ್ಟೇ ಅಲ್ಲ ಹುಚ್ಚ ವೆಂಕಟ್ ಗೆ ಮದುವೆ ಮಾಡಿಸಿದ ಪುರೋಹಿತರು ಕೂಡಾ ಚಾನೆಲ್ ಜೊತೆ ಮಾತನಾಡಿ, ಈ ವಿಷಯವನ್ನು ಖಚಿತಪಡಿಸಿದ್ದಾರೆ. ಅವರು ಹುಚ್ಚ ವೆಂಕಟ್ ಅಂತ ನಮಗೆ ಗೊತ್ತಿರಲಿಲ್ಲವಾಗಿತ್ತು. ಆದರೆ ಅವರು ಆಗ ವೆಂಕಟರಾಮನ್ ಆಗಿದ್ದರು, ನಮ್ಮ ಸಂಪಂಗಿರಾಮನಗರದ ಗಣಪತಿ ದೇವಸ್ಥಾನದಲ್ಲೇ 2007ರಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾದ್ರೆ ಹುಚ್ಚ ವೆಂಕಟ್ ಪತ್ನಿ ಎಲ್ಲಿಗೆ ಹೋದರು? ವೆಂಕಟ್ ಪತ್ನಿಯನ್ನು ಬಿಟ್ಟಿದ್ದಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿದೆ….

ಪತ್ನಿಯನ್ನು ನೆನೆದು ಕಣ್ಣೀರಿಟ್ಟ ವೆಂಕಟ್
ಆರಂಭದಲ್ಲಿ ತಾನು ಮದುವೆಯಾಗಿಲ್ಲ, ಹುಡುಗಿ ಇದ್ದರೆ ಹೇಳಿ. ಹೀಗೆ ತನ್ನ ವರಾತ ಮುಂದುವರಿಸಿದ್ದ ಹುಚ್ಚ ವೆಂಕಟ ಕೊನೆಗೂ ತಾವು ಮದುವೆಯಾಗಿದ್ದ ವಿಷಯವನ್ನು ಸ್ಟುಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ನನ್ನ ಹೆಂಡ್ತಿ ಹೆಸರು ರೇಷ್ಮಾ. ರೇಷ್ಮಾಳನ್ನು ಪ್ರೀತಿಸಿ ಮದುವೆಯಾಗಿದ್ದೆ. ನಾನು ಆಕೆಯನ್ನು ಬಿಟ್ಟಿಲ್ಲ, ಆಕೆ ನನ್ನ ಬಿಟ್ಟು ಹೋಗಿದ್ದು. ಎಲ್ಲೆ ಇರು, ಹೇಗೆ ಇರು ಚೆನ್ನಾಗಿರು ಎಂದು ಹಾರೈಸಿದ್ದಾರೆ ಹುಚ್ಚ ವೆಂಕಟ ಅಲಿಯಾಸ್ ವೆಂಕಟರಾಮನ್.

ಮತ್ತೆ ನನ್ನ ಬದುಕಲ್ಲಿ ಬರಬೇಡ ಪುಟ್ಟಾ(ರೇಷ್ಮಾ), ನೀನು ಬಂದರೆ ನಾನು ಸಿನಿಮಾ ಜಗತ್ತನ್ನು ಮರೆಯುತ್ತೇನೆ. ನೀನು ಮತ್ತೆ ಬಾಳಲ್ಲಿ ಬರಬೇಡ ಎಂದು ಹುಚ್ಚ ವೆಂಕಟ್ ಹೇಳಿದ್ದಾರೆ. ಮತ್ತೆ ನಾಲ್ಕು ವರ್ಷ ಬಿಟ್ಟು ಬೇರೆ ಹುಡುಗಿ ಜೊತೆ ಮದುವೆಯಾಗುತ್ತೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ಅಪ್ಪನ ಹಣದಲ್ಲಿ ಸಿನಿಮಾ ಮಾಡಿದ್ದೇನೆ, ಹಣ ಕಳೆದಿದ್ದೇನೆ. ಮದುವೆ ನನ್ನ ವೈಯಕ್ತಿಕ ವಿಷಯ ಎಂದು ಈಟಿವಿ ಕಾರ್ಯಕ್ರಮದಲ್ಲಿ ವೆಂಕಟ್ ತಿಳಿಸಿದ್ದಾರೆ.

Write A Comment