ಕನ್ನಡ ವಾರ್ತೆಗಳು

ಬಾರ್ಕೂರು: ಚಲಿಸುತ್ತಿದ್ದ ರೈಲಿನಿಂದ ಚಿನ್ನದ ಸರ ಸೆಳೆದು ಪರಾರಿ

Pinterest LinkedIn Tumblr

Rail_chain_snatching.

ಉಡುಪಿ: ಬಾರಕೂರು ರೈಲು ನಿಲ್ದಾಣದಲ್ಲಿ ಮುಂಬಯಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಮಹಿಳೆಯ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ಸಂಭವಿಸಿದೆ. ಕೋಯಿಕ್ಕೋಡ್‌ನ ಗಿರಿಜಾ ರಾಜನ್ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ.

ಅವರು ಸಂಬಂಧಿಕರೊಂದಿಗೆ ಮಂಗಳೂರಿನಿಂದ ಬೈಂದೂರಿಗೆ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಸುಮಾರು 25-30 ವರ್ಷ ಪ್ರಾಯದ ವ್ಯಕ್ತಿ ಕುತ್ತಿಗೆಯಲ್ಲಿದ್ದ 60 ಗ್ರಾಂ ತೂಕದ ಎರಡು ಚಿನ್ನದ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ.

ಸರಗಳ ಮೌಲ್ಯ 1,40,000 ರೂ. ಆಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Write A Comment