ಕರ್ನಾಟಕ

ಕುರುಬ ಸಮುದಾಯದ ಕುರಿತು ನೀಡಿದ್ದ ಹೇಳಿಕೆಯನ್ನು ಹಿಂಪಡೆದ ಸಂಸದ ಪ್ರತಾಪ್ ಸಿಂಹ

Pinterest LinkedIn Tumblr

prath

ಮೈಸೂರು: ಟಿಪ್ಪುವಿನ ಕ್ರೌರ್ಯಕ್ಕೆ ಕೊಡಗಿನವರ ಬದಲು ಕುರುಬರು ತುತ್ತಾಗಿದ್ದರೆ ಟಿಪ್ಪು ಜಯಂತಿ ಆಚರಿಸುತ್ತಿದ್ದಿರಾ ಎಂಬ ಹೇಳಿಕೆಯನ್ನು ಹಿಂಪಡೆಯುವುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಟಿಪ್ಪುವಿನ ಆಡಳಿತ ದೌರ್ಜನ್ಯ, ಲೂಟಿ, ಕಗ್ಗೊಲೆಗಳಿಂದ ಕೂಡಿತ್ತು ಎನ್ನುವುದಕ್ಕೆ ಇತಿಹಾಸದ ಪುಟಗಳು ಸಾಕ್ಷಿಯಾಗಿ ನಿಂತಿವೆ. ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿರುವ ಸಿಎಂ ಟಿಪ್ಪು ಜಯಂತಿಗೆ ಮುಂದಾದರು. ಸಿದ್ದರಾಮಯ್ಯನವರ ಹೃದಯಕ್ಕೆ ನಾಟಿ ನಿರ್ಧಾರವನ್ನು ಬದಲಿಸಿಕೊಳ್ಳಲಿ ಎನ್ನುವ ಕಾರಣಕ್ಕೆ ನಾನು ಈ ಹೇಳಿಕೆ ನೀಡಿದ್ದೆ .

ಹೀಗಾಗಿ ನನ್ನ ಹೇಳಿಕೆ ಅಥವಾ ಲೇಖನ ಯಾವುದೋ ಒಂದು ಸಮುದಾಯದ ವಿರುದ್ಧವಲ್ಲ ಎಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಆದರೂ ಯಾರಿ ಗಾದರೂ ಇದರಿಂದ ನೋವಾಗಿದ್ದರೆ ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

Write A Comment