ಕರ್ನಾಟಕ

ಅಶೋಕ್‌ಸಿಂಘಾಲ್ ಸ್ಥಿತಿ ಗಂಭೀರ

Pinterest LinkedIn Tumblr

ashok-singhal

ಬೆಂಗಳೂರು, ನ.15: ವಿಶ್ವ ಹಿಂದೂ ಪರಿಷತ್‌ನ ಅತ್ಯುನ್ನತ ನಾಯಕರಾಗಿದ್ದ ಅಶೋಕ್‌ಸಿಂಘಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಅಶೋಕ್ ಸಿಂಘಾಲ್ ಅವರು ಕಳೆದ ಅ.20ರಂದು ಹರಿಯಾಣದ ಗುರುಗಾಂವ್‌ನ ಮೇದಾಂತ್ ಆಸ್ಪತ್ರೆಗೆ ದಾಖಲಾಗಿದ್ದರು.

ಕಳೆದ ಎರಡು ದಿನಗಳಿಂದ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದ ಅವರು ಮತ್ತೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆದೊಯ್ಯುವ ತಯಾರಿ ನಡೆದಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನದ್ದಾ, ವಿಎಚ್‌ಪಿಯ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಓಂಪ್ರಕಾಶ್ ಸಿಂಘಾಲ್, ಪ್ರಧಾನ ಕಾರ್ಯದರ್ಶಿ ಸಂಪತ್‌ರಾಯ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಅಶೋಕ್ ಸಿಂಘಾಲ್ ಅವರ ಆರೋಗ್ಯ ವಿಚಾರಿಸಿದರು.

ಅಶೋಕ್ ಸಿಂಘಾಲ್ ಅವರ ಆರೋಗ್ಯ ವಿಷಮಿಸಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಾಳೆಯಿಂದ ದೀಪಾವಳಿ ಮಿಲನ್ 18ದಿನಗಳ ಕಾರ್ಯಕ್ರಮವನ್ನು ಸಂಘ ಪರಿವಾರ ರದ್ದು ಪಡಿಸಿದೆ.

Write A Comment