ಕರ್ನಾಟಕ

‘ಕುಂಚಿಟಿಗರ ಸಮಾವೇಶ’ ಹಿಂದುಳಿದ ವರ್ಗಕ್ಕೆ ಕುಂಚಿಟಿಗರು, ಕೇಂದ್ರಕ್ಕೆ ಶಿಫಾರಸು: ಸಿದ್ದರಾಮಯ್ಯ

Pinterest LinkedIn Tumblr

CM inaugurating the Kunchitigara Convention held at Palace Grounds in Bangalore on Saturday Nov 07 2015. Ministers H. Anjaneya, Dr.G.Parameshwar, TB Jayachandra, former Union Minister Boota Singh, Shri Shantaveera Swami and Shri Hanumanthanatha Swamy were also present - KPN ### CM at Kunchitigara Convention.

ಬೆಂಗಳೂರು, ನ.7: ಕುಂಚಿಟಿಗರ ಸಮುದಾಯ ವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ‘ಕುಂಚಿಟಿಗರ ಸಮಾವೇಶ’ ಮತ್ತು ನೂತನ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಹಕಾರ ಸಂಘ-ಸಂಸ್ಥೆಗಳ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಂಚಿಟಿಗ ಸಮುದಾಯ ಆರ್ಥಿಕ, ಸಾಮಾ ಜಿಕ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಈ ಸಮುದಾಯವನ್ನು ಹಿಂದು ಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿ ಸರಕಾರದಿಂದ ಶಿಫಾರಸು ಮಾಡ ಲಾಗುವುದು ಎಂದರು. ಜಾತಿ ವ್ಯವಸ್ಥೆಯಿಂದ ಅವಕಾಶ ವಂಚಿತರಾಗಿರುವವರನ್ನು ಮುಖ್ಯವಾ ಹಿನಿಗೆ ತರಬೇಕಾಗಿದೆ. ಸಮಾನತೆಯ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಮೂಲಕ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ ಎಂದು ತಿಳಿಸಿದರು.
ಕುಂಚಿಟಿಗೆ ಸಮುದಾಯದ ಹಿರಿಯರು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ 10 ಎಕರೆ ಭೂಮಿಯನ್ನು ಕೇಳಿದ್ದಾರೆ. ದಾಸರಹಳ್ಳಿಯಲ್ಲಿ 6 ಎಕರೆ ಭೂಮಿಯನ್ನು ನೀಡಲಾಗುವುದು ಹಾಗೂ ಹಣಕಾಸು ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಜಾತಿ ಸಮಾವೇಶಗಳಿಂದ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಕೆಲವರು ವಿರೋಧಿಸುತ್ತಾರೆ. ಆದರೆ, ಹಿಂದುಳಿದ ಜಾತಿಗಳು ಸಮಾವೇಶಗಳನ್ನು ಮಾಡುವುದರಿಂದ ಅವರಿಗೆ ಬೇಕಾದವುಗಳನ್ನು ಕೇಳಲು ಅವರಿಗೆ ವೇದಿಕೆ ದೊರೆಯುತ್ತದೆ ಎಂದು ನುಡಿದರು.
ಸಮಾನತೆ ದೊರೆಯುವವರೆಗೆ ಜಾತಿ ಇರುವುದು ಆವಶ್ಯ. ಮೀಸಲಾತಿಯನ್ನು ನೀಡಲು ಸಮುದಾಯದ ಹಿನ್ನೆಲೆ ಹಾಗೂ ಜಾತಿ ಇರಬೇಕು ಎಂದ ಅವರು, ಕೇವಲ ಘೋಷಣೆಗಳಿಂದ ಜಾತಿ ವ್ಯವಸ್ಥೆಯನ್ನು ಕಿತ್ತುಹಾಕಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆ ತರೆ ಮಾತ್ರ ಜಾತಿ ಅಳಿಯಲು ಸಾಧ್ಯ ಎಂದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಕುಂಚಿಟಿಗ ಸಮುದಾಯಕ್ಕೆ 2,500 ವರ್ಷಗಳ ಇತಿಹಾಸವಿದ್ದು, ನಾನು ರಾಜಕೀಯವಾಗಿ ಬೆಳೆಯಲು ಶಕ್ತಿ ನೀಡಿದ್ದು ಇದೇ ಸಮುದಾಯ ಎಂದು ನೆನಪಿಸಿಕೊಂಡರು.
ರಾಜ್ಯ ಸರಕಾರ ಹಮ್ಮಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿ ಸಮೀಕ್ಷೆಯಿಂದ ಯಾವ ಜಾತಿಯವರು ಹಿಂದುಳಿದಿದ್ದಾರೆ, ಯಾವ ಜಾತಿಯವರು ಮುಂದಿದ್ದಾರೆ ಎಂದು ತಿಳಿಯಲಿದೆ. ಇದು ಬಜೆಟ್ ಮಂಡನೆ ಮಾಡುವಾಗ ಸಹಾಯಕವಾಗಲಿದೆ ಎಂದರು. ಮಾಜಿ ಕೇಂದ್ರ ಸಚಿವ ಬೂಟಾಸಿಂಗ್ ಮಾತನಾಡಿ, ಕುಂಚಿಟಿಗ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಮಾಡಲಾಗುವುದು ಹಾಗೂ ಈ ಕುರಿತು ಮುಂದಿನ ಸಂಸತ್ ಅಧಿವೇ ಶನದಲ್ಲಿ ಚರ್ಚಿಸುವಂತೆ ಕಾಂಗ್ರೆಸ್ ಸದಸ್ಯರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಂತವೀರ ಸ್ವಾಮೀಜಿ, ಹನು ಮಂತನಾಥ ಸ್ವಾಮೀಜಿ, ಎಐಸಿಸಿ ಕಾರ್ಯ ದರ್ಶಿ ಶಾಂತಾರಾಮ್ ನಾಯಕ್, ಸಚಿವ ಟಿ.ಬಿ. ಜಯಚಂದ್ರ, ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್, ಸಚಿವ ಎಚ್.ಆಂಜನೇಯ, ಕುಂಚಿಟಿಗರ ಸಮಾವೇಶದ ಅಧ್ಯಕ್ಷ ಮುರಳೀಧರ ಹಾಲಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Write A Comment