ಕರ್ನಾಟಕ

ವಿಜಯ ಬ್ಯಾಂಕ್‌ಗೆ 115 ಕೋಟಿ ರೂ. ಲಾಭ: ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕಿಶೋರ್ ಸಾನ್ಸಿ

Pinterest LinkedIn Tumblr

viಬೆಂಗಳೂರು,ನ.7: ಪ್ರಸಕ್ತ ಹಣಕಾಸು ವರ್ಷದ ಎರಡನೆ ತ್ರೈಮಾಸಿಕ ಅವಧಿಯಲ್ಲಿ ವಿಜಯ ಬ್ಯಾಂಕ್ 115.29 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕಿಶೋರ್ ಸಾನ್ಸಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೆ ತ್ರೈಮಾಸಿಕ ಹಣಕಾಸು ವರ್ಷದಲ್ಲಿ ಲಾಭದಲ್ಲಿ ಸೇ. 19.80 ರಷ್ಟು ಇಳಿಕೆ ಕಂಡಿದೆ. ಬ್ಯಾಂಕಿನ ಒಟ್ಟು ಆದಾಯದಲ್ಲಿ ಕಳೆದ ಅವಧಿ ಯಲ್ಲಿ 3,253.75 ಕೋಟಿ ರೂ.ಲಾಭ ಗಳಿಸಿತ್ತು. ಈ ವರ್ಷ 3,202.89 ಕೋಟಿ ರೂ.ಗೆ ಇಳಿಕೆ ಕಂಡಿದೆ ಎಂದು ತಿಳಿಸಿದರು.

ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ ಶೇ.19.67ರಷ್ಟು ಪ್ರಗತಿ ಕಂಡು 692.55 ಕೋಟಿ ರೂ. ಗೆ ಹೆಚ್ಚಳವಾಗಿದೆ. ಆದ್ಯತಾ ವಲಯ ಸಾಲ ನೀಡಿಕೆಯಲ್ಲಿ 33,293 ಕೋಟಿ.ರೂ.ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಕೃಷಿ ವಲಯದಲ್ಲಿ ಶೇ. 16.09ರಷ್ಟು ಪ್ರಗತಿ ಹೊಂದಿ 12,502 ಕೋಟಿ ರೂ. ಹೆಚ್ಚಳವಾಗಿದೆ ಎಂದರು.

ಬ್ಯಾಂಕಿಗೆ 193.93 ಕೋಟಿ ರೂ. ಇತರ ಆದಾಯ ಮೂಲ ಗಳಿಂದ ಬಂದಿದ್ದು, 1,23,199 ಕೋಟಿ ರೂ.ಠೇವಣಿ ಹಣ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

Write A Comment