ರಾಷ್ಟ್ರೀಯ

ದೀಪಾವಳಿಗೆ ಮೊಬೈಲ್ ಖರೀದಿಸುತ್ತಿದ್ದೀರಾ..?

Pinterest LinkedIn Tumblr

deepaಹೌದು, ದೀಪಾವಳಿ ಸಮೀಪಿಸುತ್ತಿದೆ, ಮೊಬೈಲ್ ಕಂಪನಿಗಳು ಸ್ಪರ್ಧೆಗೆ ಬಿದ್ದವರಂತೆ ಆಫರ್‍ಗಳ ಮೇಲೆ ಆಫರ್ ನೀಡಿ ನಾನಾ ಬಗೆಯ ಮೊಬೈಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ದೀಪಾವಳಿ ಆಫರ್‍ಗಳಿಗಾಗೇ ಕಾದು ಕೂತವರು ಮೊಬೈಲ್ ಖರೀದಿಸುವ ತಯಾರಿ ನಡೆಸುತ್ತಿದ್ದರೆ, ಅಥವಾ ಇರುವ ಮೊಬೈಲ್‍ನ್ನು ಬದಲಾಯಿಸಿಕೊಳ್ಳಲು ಕಾಯುತ್ತಿದ್ದರೆ ಇದನ್ನೊಮ್ಮ ಓದಿ ಮೊಬೆÉೈಲ್ ಶಾಪ್‍ಗಳತ್ತ ಹೊರಡಿ. ತಿಂಗಳಿಗೊಂದರಂತೆ ಮೊಬೈಲ್ ಬದಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಗೆಬಗೆಯ ಮೊಬೈಲ್ ಫೆÇೀನ್‍ಗಳ ವಿಶೇಷತೆಯೊಂದಿಗೆ ಇಂಟರ್‍ನೆಟ್, ವೈಫೈü, ಟಚ್‍ಸ್ಕ್ರೀನ್ ಇರುವುದರಿಂದ ಕಂಪನಿಗಳು ವಿವಿಧ ರೀತಿಯ ಸ್ಮಾರ್ಟ್ ಫೆÇೀನ್‍ಗಳನ್ನು ದಿನಕ್ಕೊಂದರಂತೆ ಬಿಡುಗಡೆ ಮಾಡುತ್ತಲೇ ಇರುತ್ತವೆ.

ಮಾರುಕಟ್ಟೆಯಲ್ಲಿ ಆಯ್ಕೆಗಳು ಹೆಚ್ಚಿದ್ದಷ್ಟು ಗ್ರಾಹಕರಿಗೆ ಗೊಂದಲಗಳು ಹೆಚ್ಚು. ಕಳೆದ ತಿಂಗಳು ಖರೀದಿಸಿದ ಮೊಬೈಲ್‍ನಲ್ಲಿ ಈ ತಿಂಗಳು ಬಿಡುಗಡೆಯಾದ ಮೊಬೈಲ್‍ನಲ್ಲಿರುವಷ್ಟು ಅಪ್ಲಿಕೇಷನ್ಸ್ ಇರುವುದಿಲ್ಲ. ಹಾಗಾದರೆ ಸದ್ಯದ ತಂತ್ರಜ್ಞಾನದಲ್ಲಿ ಮೊಬೈಲ್‍ನಲ್ಲಿ ಸಾಮಾನ್ಯವಾಗಿ ಏನು ಇರಬೇಕು, ಯಾವುದು ಅವಶ್ಯಕ, ಯಾವುದು ಅನಾವಶ್ಯಕ ಎಂದು ಮೊಬೈಲ್ ಖರೀದಿಸುವ ಮುನ್ನವೇ ತಿಳಿದುಕೊಂಡರೆ ಮತ್ತೆ ಮತ್ತೆ ಮೊಬೈಲ್ ಬದಲಾಯಿಸುವ ಅನಿವಾರ್ಯತೆ ಎದುರಾಗುವುದಿಲ್ಲ. ಹೀಗಾಗಿ ಸ್ಮಾರ್ಟ್‍ಫೆÇೀನ್‍ಗಳನ್ನು ಕೊಳ್ಳುವ ಮುನ್ನ ಕೆಳಗಿನ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ಕಂಪ್ಯೂಟರ್‍ನ ತಾತ್ಕಾಲಿಕ ಸ್ಮರಣ ಶಕ್ತಿಯನ್ನು ನಾವು RAM ಎಂದು ಕರೆಯುತ್ತೇವೆ. ಹಾಗಾಗಿ  RAM ಹೆಚ್ಚಿದಷ್ಟು ನೀವು ಸ್ಮಾರ್ಟ್‍ಫೆÇೀನ್‍ನಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ. ಹಾಗಾಗಿ ಕನಿಷ್ಠ 1ಜಿಬಿಯಿಂದ 2 ಜಿಬಿ RAM  ಗಳಿರುವ ಸ್ಮಾರ್ಟ್‍ಫೆÇೀನ್ ಖರೀದಿಸಿದರೆ ಉತ್ತಮ. 1 ಜಿಬಿ ಇದ್ದರೆ ನಿಮ್ಮ ವೆಬ್‍ಸೈಟ್ ಹುಡುಕುವುದು, ಇಮೇಲ್, ಫೇಸ್‍ಬುಕ್ ಕೆಲಸ ಸುಲಭವಾಗಿ ಮಾಡಬಹುದು. ಅನಿವಾರ್ಯವಿರುವಷ್ಟು ಅಪ್ಲಿಕೇಷನ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಅದು ಹೆಸರಿಗಷ್ಟೆ ಸ್ಮಾರ್ಟ್ ಫೋನ್ ಎನಿಸುತ್ತದೆ.
ನಂತರ ಎರಡನೆಯದಾಗಿ ಪೆÇ್ರಸೆಸರ್ ಎಷ್ಟು ಶಕ್ತಿಯುತವಾಗಿದೆ, ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ. ಪೆÇ್ರಸೆಸರ್‍ನ್ನು ಸ್ಮಾರ್ಟ್‍ಫೆÇೀನ್‍ನ ಹೃದಯವೆಂದೇ ಕರೆಯುತ್ತೇವೆ. ಹಲವಾರು ಕೆಲಸಗಳನ್ನು ಏಕಕಾಲಕ್ಕೆ ಮಾಡಲು ಸಹಾಯ ಮಾಡುವುದೇ ಪೆÇ್ರಸೆಸರ್. ಮೆಗಾಹಟ್ರ್ಸ, ಗಿಗಾಹಟ್ರ್ಸ, ಸಿಂಗಲ್ ಕೋರ್, ಡ್ಯುಯಲ್ ಕೋರ್ ಕ್ವಾಡ್ ಕೋರ್ ಪೆÇ್ರಸೆಸರ್‍ಗಳು ಮಾರುಕಟ್ಟೆ ಯಲ್ಲಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ಯಾಡ್ ಕೋರ್ ಪೆÇ್ರಸೆಸರ್‍ನ್ನು ಅನೇಕ ಮೊಬೈಲ್ ಖರೀದಿಸುವ ಮೊದಲು ಆ ಮೊಬೈಲ್‍ಗಿರುವ ವಾರಂಟಿಯನ್ನು ತಿಳಿದುಕೊಳ್ಳಿ.

ಕನಿಷ್ಠ ಒಂದು ವರ್ಷದ ವಾರಂಟಿ ಇರುವ ಸ್ಮಾರ್ಟ್‍ಫೆÇೀನ್ ಖರೀದಿಸಿ. ಒಂದು ವರ್ಷದೊಳಗೆ ನಿಮ್ಮ ಸ್ಮಾರ್ಟ್‍ಫೆÇೀನ್‍ನ ಯಾವುದಾದರೂ ಭಾಗ ಹಾಳಾದ್ರೂ ಬದಲಿಸಬಹುದು.
ಆಂಡ್ರಾಯ್ಡ್ ಮೊಬೈಲ್ ಫೆÇೀನ್‍ಲ್ಲಿ ಸದ್ಯ ಐಸಿಎಸ್ (ಐಸ್‍ಕ್ರೀಮ್ ಸ್ಯಾಂಡ್ವಿಚ್) ಆಪರೆಟಿಂಗ್ ಸಿಸ್ಟಂ ಇರುವ ಸ್ಮಾರ್ಟ್‍ಫೆÇೀನ್‍ಗಳು ಹೆಚ್ಚಿವೆ. ಇತ್ತೀಚೆಗೆ ಅಪ್‍ಡೇಟ್ ವರ್ಷನ್ ಆಗಿ ಕಿಟ್‍ಕ್ಯಾಟ್ ಓಎಸ್ ಇರುವ ಮೊಬೈಲ್‍ಗಳು ಮಾರುಕಟ್ಟೆಗೆ ಬಂದಿವೆ. ಈ ಆಪರೇಟಿಂಗ್ ಸಿಸ್ಟ್ಟ್‍ಂನಲ್ಲಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಅಪ್ಲಿಕೇಷನ್‍ಗಳನ್ನು  ಆಪರೇಟ್ ಮಾಡಬಹುದು. ಇಷ್ಟೇ ಅಲ್ಲದೇ ಈಗಿನ ಮಾರುಕಟ್ಟೆಯಲ್ಲಿ ಐಸಿಎಸ್‍ಗಿಂತ ನಂತರದ ಆವೃತ್ತಿ ಜೆಲ್ಲಿಬೀನ್ ಓಎಸ್ ಇರುವಂತಹ ಸ್ಮಾರ್ಟ್‍ಫೆÇೀನ್‍ಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಆ್ಯಂಡ್ರಾಯ್ಡ್ 4.0 ಇರುವಂತಹ ಐಸಿಎಸ್ ಓಎಸ್ ಖರೀದಿಸಿದರೆ ಉತ್ತಮ. ಏಕೆಂದರೆ 3ಜಿ ಬಳಕೆದಾರರಿಗೆ ವೇಗವಾಗಿ ಕಾರ್ಯನಿರ್ವಹಿಸಲು ಇದು ಅನಿವಾರ್ಯ.

ಸ್ಮಾರ್ಟ್‍ಫೆÇೀನ್ ಖರೀದಿಸುವಾಗ ಬ್ಯಾಟರಿ ಬಗ್ಗೆ ಗಮನಹರಿಸಿ. ನಿಮ್ಮ ಸ್ಮಾರ್ಟ್‍ಫೆÇೀನ್‍ನ ಸ್ಕ್ರೀನ್ ದೊಡ್ಡದಿದ್ದಷ್ಟು ಬ್ಯಾಟರಿ ಹೆಚ್ಚು ಹೀರಿಕೊಳ್ಳುತ್ತದೆ. ಹಾಗಾಗಿ ಸ್ಮಾರ್ಟ್‍ಫೆÇೀನ್ ಖರೀದಿಸುವಾಗ 1500-2000mಂh   ಬ್ಯಾಟರಿ ಹೊಂದಿರುವ ಸ್ಮಾರ್ಟ್‍ಫೆÇೀನ್ ಖರೀದಿಸುವುದು ಒಳಿತು. ಇಂದು ಎಲ್ಲಾ ಸ್ಮಾರ್ಟ್‍ಫೆÇೀನ್‍ಗಳ ಕಂಪನಿಗಳು ಕ್ಯಾಮೆರಾಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿವೆ. ನಿಮಗೆ ವೀಡಿಯೋ ಕಾಲಿಂಗ್ ಬೇಕಾದ್ರೆ ಎದುರುಗಡೆ ಇರುವಂತಹ ಕ್ಯಾಮೆರಾವನ್ನು ಖರೀದಿಸಿ. ಜೊತೆಗೆ ಕ್ಯಾಮೆರಾಕ್ಕೆ ಫ್ಲ್ಯಾಶ್ ಆಯ್ಕೆ ಇದೆಯೋ ಇಲ್ಲವೊ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇನ್ನೂ ಮುಂದುವರೆದು ಸೆಲ್ಫೀಗಳನ್ನು ತೆಗೆಯಲು ಅನುಕೂಲಕರವಾದ ಮೊಬೈಲ್‍ಗಳೂ ಸಹ ಮಾರುಕಟ್ಟೆಯಲ್ಲಿವೆ ಅವುಗಳ ಬಗ್ಗೆಯೂ ಗಮನಹರಿಸಿ. ಏಕೆಂದರೆ ಸೆಲ್ಫಿ ಎಂಬುದು ಇತ್ತೀಚಿನ ದಿನಗಳಲ್ಲಿ ಇನ್ನಿಲ್ಲದ ಟ್ರೆಂಟ್ ಆಗಿ ಬದಲಾಗಿದೆ.

ಸ್ಕ್ರೀನ್ ಚೆನ್ನಾಗಿದ್ದರೆ ತಾನೇ ನಿಮ್ಮ ಕೆಲಸ ಸುಲಭವಾಗುವುದು. 480X320 ಫಿಕ್ಸೆಲ್‍ಗಳಿಗಿಂತ ಹೆಚ್ಚಿರುವ ಟಚ್‍ಸ್ಕ್ರೀನ್ ಖರೀದಿಸಿ.ಇಷ್ಟೆಲ್ಲ ಮಾಹಿತಿ ನೋಡಿದ ಮೇಲೆ ಫೆÇೀನ್ ಖರೀದಿಸುವಾಗ ನಿಮ್ಮ ಜೊತೆ ಆ್ಯಂಡ್ರಾಯ್ಡ್ ಫೆÇೀನ್ ಆಪರೆಟಿಂಗ್ ಅನುಭವ ಹೊಂದಿರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಿ. ಸ್ಮಾರ್ಟ್‍ಫೆÇೀನ್‍ನಲ್ಲಿ ನಿಮಗೆ ಬೇಕಾದ ಎಲ್ಲಾ ವಿಶೇಷತೆಗಳಿವೆಯೇ ಎಂಬುದನ್ನು ಪರೀಕ್ಷಿಸಿ ನಂತರ ಸ್ಮಾರ್ಟ್‍ಫೆÇೀನ್ ಖರೀದಿಸಿ.ಗೂಗಲ್ ಕಂಪೆನಿ ಆ್ಯಂಡ್ರಾಯ್ಡ್ ಓಎಸ್ ಅಪ್‍ಡೆಟ್ ಮಾಡುತ್ತಲೇ ಇರುತ್ತಾರೆ. ಜಿಂಜರ್‍ಬ್ರೆಡ್ ಇದ್ದದ್ದು ಐಸ್‍ಕ್ರೀಮ್ ಸ್ಯಾಂಡ್ವಿಚ್ ಆಯ್ತು, ಈಗ ಐಸಿಎಸ್ ಹೋಗಿ ಜೆಲ್ಲಿ ಬೀನ್ ಆಗಿದೆ. ಇದೂ ಈಗ ಬದಲಾಗಿ ಕಿಟ್‍ಕ್ಯಾಟ್‍ಗೆ ಬದಲಾಗಿದೆ. ಹಾಗಾಗಿ ಮೊಬೈಲ್ ಖರೀದಿಸುವಾಗ ಸ್ಮಾರ್ಟ್‍ಫೆÇೀನ್‍ನಲ್ಲಿ ಆ್ಯಂಡ್ರಾಯ್ಡ್ ಓಎಸ್ ಅಪ್‍ಡೆಟ್ ಮಾಡಲು ಆಗುತ್ತದೆಯೇ ಎಂಬುದನ್ನು ವಿಚಾರಿಸಿಕೊಳ್ಳಿ. ಒಂದು ವೇಳೆ ಕಡಿಮೆ ಸಾಮಥ್ರ್ಯ ಹೊಂದಿರುವ ಹ್ಯಾಂಡ್‍ಸೆಟ್ ನಿಮ್ಮಲ್ಲಿದ್ದರೆ ಓಎಸ್ ಅಪ್‍ಡೆಟ್ ಮಾಡಲು ಸಾಧ್ಯವಿಲ್ಲ.

ಸ್ಮಾರ್ಟ್ ಫೋನ್ ಖರೀದಿಸುವಾಗ ಮುಖ್ಯವಾಗಿ ರ್ಯಾಮ್, ಕ್ಯಾಮರಾ, ಆ್ಯಂಡ್ರಾಯ್ಡ್ ವರ್ಷನ್, ಯೂಸರ್ ಮೆಮೊರಿ, ಇಂಟರ್‍ನಲ್ ಮೆಮೊರಿ ಹಾಗೂ ಎಕ್ಸ್ಪಾಂಡೆಬೆಲ್ ಮೆಮೋರಿಗಳ ಬಗ್ಗೆ ಹೆಚ್ಚಿನ ಗಮನವಹಿಸಿ. ಜೊತೆಗೆ ಕನ್ನಡ ಫಾಂಟ್ ಸಪೋರ್ಟ್ ಮಾಡುತ್ತದೆಯೇ ಎಂಬುದನ್ನು ಗಮನಿಸುವುದನ್ನು ಮರೆಯಬೇಡಿ. ಸಾಮಾನ್ಯವಾಗಿ 6000 ರೂ. ಗಿಂತ ಹೆಚ್ಚಿನ ಬೆಲೆ ಮೊಬೈಲ್‍ಗಳು ಎಲ್ಲಾ ಅಪ್ಲಿಕೇಷನ್‍ಗಳು ಕನ್ನಡ ಫಾಂಟ್ ಸಪೋರ್ಟ್ ಮಾಡುತ್ತವೆ. ಯಾವುದಕ್ಕೂ ಇತ್ತೀಚೆಗೆ ಅಪ್‍ಡೇಟ್ ಆಗಿರೋ ಮೊಬೈಲ್ ಖರೀದಿಸಿ, ಇದರಿಂದ ಮತ್ತೊಮ್ಮೆ ನೀವು ಫೋನ್ ಬದಲಾಯಿಸುವುದನ್ನು ತಪ್ಪಿಸಬಹುದು.

Write A Comment