ಕರ್ನಾಟಕ

ಭಾರತ್‌ಸ್ಕೌಟ್ಸ್ ಅ್ಯಂಡ್ ಗೈಡ್ಸ್‌ನ ಸಂಸ್ಥಾಪನಾ ದಿನಾಚರಣೆ: ಸರ್ವಾಂಗೀಣ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ 3ನೆ ಸ್ಥಾನ; ಸಿದ್ದರಾಮಯ್ಯ

Pinterest LinkedIn Tumblr

scout_-fiಬೆಂಗಳೂರು,ನ.7: ಸರ್ವಾಂಗೀಣ ಅಭಿವೃದ್ಧಿಯಲ್ಲಿ ರಾಜ್ಯವು ದೇಶದಲ್ಲೇ ಮೂರನೆ ಸ್ಥಾನಕ್ಕೆ ತಲುಪಿರುವುದು ಇಂಡಿಯಾ ಟುಡೆ ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಶನಿವಾರ ತಮ್ಮ ನಿವಾಸ ಕಾವೇರಿಯಲ್ಲಿ ಭಾರತ್‌ಸ್ಕೌಟ್ಸ್ ಅ್ಯಂಡ್ ಗೈಡ್ಸ್‌ನ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಟೀಕಿಸು ತ್ತಿದ್ದ ವಿರೋಧ ಪಕ್ಷಗಳಿಗೆ ಇಂಡಿಯಾ ಟುಡೆ ನಡೆಸಿರುವ ಸಮೀಕ್ಷೆ ಉತ್ತರ ನೀಡಿದಂತಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ 13ನೆ ಸ್ಥಾನದಲ್ಲಿದ್ದ ರಾಜ್ಯ, ಇದೀಗ ಮೂರನೆ ಸ್ಥಾನಕ್ಕೆ ತಲು ಪಿದೆ ಎಂದು ಅವರು ಹೇಳಿದರು.
ಗುಜರಾತ್ ಹಾಗೂ ಕೇರಳ ನಂತರದ ಸ್ಥಾನದಲ್ಲಿ ಕರ್ನಾ ಟಕವಿದೆ. ಬಂಡವಾಳ ಹೂಡಿಕೆಯಲ್ಲೂ ರಾಜ್ಯ ಮುಂಚೂಣಿ ಯಲ್ಲಿದೆ. ಈ ಅಂಕಿ ಅಂಶಗಳನ್ನು ನಾವಲ್ಲ, ಇಂಡಿಯಾ ಟುಡೆ ಯ ಸಮೀಕ್ಷೆ ಹೇಳುತ್ತಿರುವುದು ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.
ರಾಜ್ಯ ಸರಕಾರದ ವಿರುದ್ಧ ಮಾತನಾಡಲು ಬೇರೆ ಯಾವುದೆ ವಿಚಾರಗಳಿಲ್ಲದೆ ವಿರೋಧ ಪಕ್ಷಗಳು ಗೋಮಾಂಸ ಸೇವನೆ, ಟಿಪ್ಪುಸುಲ್ತಾನ್ ಜಯಂತಿಯಂತಹ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಟಿಪ್ಪುಸುಲ್ತಾನ್ ಸ್ವಾತಂತ್ರದ ರೂವಾರಿ: ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ ಬ್ರಿಟೀಷರ ವಿರುದ್ಧ ಮೂರು ಯುದ್ಧಗಳನ್ನು ಮಾಡಿದರು. ನಿಜವಾದ ಸ್ವಾತಂತ್ರದ ಹೋರಾಟ ಆರಂಭವಾ ದದ್ದು ಈ ಆಂಗ್ಲೊ-ಮೈಸೂರು ಯುದ್ಧಗಳ ಮೂಲಕ ಎಂದು ಮುಖ್ಯಮಂತ್ರಿ ಅಭಿಪ್ರಾಯಿಸಿದರು.
ಟಿಪ್ಪುಸುಲ್ತಾನ್ ಮತಾಂಧ, ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿಸಿದ ಎಂಬುದೆಲ್ಲ ಆಧಾರರಹಿತವಾದದ್ದು. ಶೃಂಗೇರಿ ಶಾರದಾ ಪೀಠ, ನಂಜನಗೂಡು, ಶ್ರೀರಂಗನಾಥ ಸ್ವಾಮಿ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಟಿಪ್ಪುಸುಲ್ತಾನ್ ಅಪಾರ ನೆರವು ನೀಡಿರುವುದು ಐತಿಹಾಸಿಕ ಸತ್ಯ. ಒಬ್ಬ ಜಾತ್ಯ ತೀತ ವ್ಯಕ್ತಿ ಮಾತ್ರ ಈ ರೀತಿ ಸರ್ವ ಧರ್ಮಗಳನ್ನು ಗೌರವಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ನಿವೃತ್ತಿ ಐಎಎಸ್ ಅಧಿಕಾರಿ ಸಿದ್ದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment