ಕರ್ನಾಟಕ

ದೀಪಾವಳಿ: ರಾತ್ರಿ 10ರನಂತರ ಪಟಾಕಿ ಸಿಡಿಸಲು ನಿಷೇಧ

Pinterest LinkedIn Tumblr

Crac ಬೆಂಗಳೂರು, ನ.7: ದೀಪಾವಳಿ ಹಬ್ಬದ ಪ್ರಯುಕ್ತ ನ.10 ಮತ್ತು 11ರಂದು ಸಾರ್ವಜನಿಕರು ಕೆಲವೊಂದು ನಿಯಮಗಳನ್ನು ಪಾಲಿಸಬೇಕೆಂದು ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕರು ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಪಟಾಕಿ ಸಿಡಿಸಬಾರದು. ಪಟಾಕಿ ಸಿಡಿಸಿ ಪರಿಸರಕ್ಕೆ ಹಾನಿ ಹಾಗೂ ಆರೋಗ್ಯಕ್ಕೆ ಹಾನಿ ಮಾಡುವುದರ ಬದಲಿಗೆ ಹಣತೆಗಳನ್ನು ಹಚ್ಚಿ ಹಬ್ಬವನ್ನು ಆಚರಿಸುವುದು ಉತ್ತಮವೆಂದು ಅವರು ತಿಳಿಸಿದ್ದಾರೆ. ಪೋಷಕರು ಮಕ್ಕಳಿಗೆ ಪಟಾಕಿ ಹಚ್ಚುವುದರಿಂದ ಉಂಟಾಗುವ ಶಬ್ದ ಮಾಲಿನ್ಯ, ವಾಯು ಮಾಲಿನ್ಯಗಳ ಬಗ್ಗೆ ತಿಳುವಳಿಕೆ ನೀಡಬೇಕು.

ಮಕ್ಕಳು ಹೆಚ್ಚಿರುವ ಶಾಲಾ ಕಾಲೇಜು, ಆಸ್ಪತ್ರೆಗಳು, ದೇವಸ್ಥಾನಗಳು, ಚರ್ಚ್‌ಗಳು ಹಾಗೂ ಮಸೀದಿಗಳ ಬಳಿ ಪಟಾಕಿ ಸಿಡಿಸಬಾರದೆಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಅನ್ಯ ಕೋಮಿನ ಜನರು ವಾಸಿಸುವ ಸ್ಥಳಗಳಲ್ಲಿ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿ ತೊಂದರೆ ನೀಡಬಾರದು. ಮಕ್ಕಳ ಕೈಗೆ ಪಟಾಕಿ ಸಿಗದಂತೆ ಎಚ್ಚರ ವಹಿಸಬೇಕು.

ಪಟಾಕಿ ಕೊಳ್ಳುವ ಬದಲು ಆ ಹಣವನ್ನು ವೃದ್ದಾಶ್ರಮ ಅಥವಾ ಇತರೆ ಸಂಘಸಂಸ್ಥೆಗಳಿಗೆ ದಾನ ನೀಡಬೇಕು. ಸಾರ್ವಜನಿಕರು ಓಡಾಡುವ ಸ್ಥಳ, ರಸ್ತೆಗಳ ಮಧ್ಯದಲ್ಲಿ ಸಂಚಾರಕ್ಕೆ ಅಡಚಣೆ ಮಾಡಿ ಪಟಾಕಿ ಸಿಡಿಸಬಾರದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

Write A Comment