ರಾಷ್ಟ್ರೀಯ

ಭೂಮಿಯ ಮೇಲೆ ಸುಮಾರು 300 ಕಿಮಿಗೂ ಹೆಚ್ಚಿನ ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಯಶಸ್ವಿ

Pinterest LinkedIn Tumblr

raketಪೊಖ್ರಾನ್ (ರಾಜಸ್ಥಾನ), ನ.7- ಸುಮಾರು 300 ಕಿಮಿಗೂ ಹೆಚ್ಚಿನ ವ್ಯಾಪ್ತಿಯಲ್ಲಿ ಅತ್ಯಂತ ವೇಗವಾಗಿ ಅಪ್ಪಳಿಸಬಲ್ಲ ಮತ್ತು ಭೂಮಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನಾಪಡೆ ಇಂದಿಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಿತು.

300 ಕಿಮೀ ದೂರದ ವೈರಿ ಪಡೆ ಮೇಲೆ ದಾಳಿ ಮಾಡಿ ನಾಶಪಡಿಸಬಲ್ಲ ಸಾಮರ್ಥ್ಯದ ಬ್ರಹ್ಮೋಸ್ ಕ್ರುಯಿಸ್ ಕ್ಷಿಪಣಿಯನ್ನು ರಾಜಸ್ಥಾನದ ಪೊಖ್ರಾನ್‌ನಿಂದ ಇಂದು ಬೆಲಗ್ಗೆ 10 ಗಂಟೆಗೆ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Write A Comment