ರಾಷ್ಟ್ರೀಯ

ಬಿಹಾರ ಚುನಾವಣೆ: ಇಂದು ಮತ ಎಣಿಕೆ

Pinterest LinkedIn Tumblr

bihar-surಪಾಟ್ನ, ನ.7: ಜಿದ್ದಾಜಿದ್ದಿನ ಸ್ಪರ್ಧೆಯೇರ್ಪಟ್ಟಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ.
ವಿಧಾನಸಭೆಯ 243 ಸ್ಥಾನಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ ಹಾಗೂ ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸ್ಥಾನಗಳ ಫಲಿತಾಂಶ ಹೊರಬೀಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ನ ಮಹಾಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆಯ ಭವಿಷ್ಯ ನುಡಿದಿವೆ. ಆದಾಗ್ಯೂ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಕೂಟ ಓಟದಲ್ಲಿ ಕೊಂಚ ಮುಂದಿದೆ ಎಂದಿವೆ.
ಅದೇ ವೇಳೆ, ಎರಡು ಸಮೀಕ್ಷೆಗಳು (ಟುಡೇಸ್ ಚಾಣಕ್ಯ ಮತ್ತು ಎನ್‌ಡಿಟಿವಿಯ ಹಂಸ ನಡೆಸಿದ ಸಮೀಕ್ಷೆ) ಎನ್‌ಡಿಎಗೆ ಸ್ಪಷ್ಟ ಬಹುಮತವನ್ನು ನೀಡಿವೆ.
ಈ ಚುನಾವಣೆಯಲ್ಲಿ ನಿತೀಶ್ ಕುಮಾರ್, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಮತ್ತು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಸ್ಪರ್ಧಿಸಿಲ್ಲ. ಮಹಾದಲಿತ ನಾಯಕ ಜಿತನ್ ರಾಮ್ ಮಾಂಝಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಲಾಲು ಪ್ರಸಾದ್‌ರ ಇಬ್ಬರು ಪುತ್ರರು ಚೊಚ್ಚಲ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಅಕ್ಟೋಬರ್ 12ರಿಂದ ಆರಂಭಗೊಂಡ ಐದು ಹಂತಗಳ ಚುನಾವಣೆ ನವೆಂಬರ್ 5ರಂದು ಮುಕ್ತಾಯಗೊಂಡಿದೆ. ಸರಳ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ.

Write A Comment