ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

Pinterest LinkedIn Tumblr

petrolಹೊಸದಿಲ್ಲಿ,ನ.7: ಮುಂಗಡಪತ್ರ ತೆರಿಗೆ ಸಂಗ್ರಹ ಗುರಿಯನ್ನು ಸಾಧಿಸಲು ಹೆಚ್ಚುವರಿ ಆದಾಯವನ್ನು ಕ್ರೋಡೀಕರಿಸುವ ಕ್ರಮವಾಗಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತೀ ಲೀಟರ್‌ಗೆ ಕ್ರಮವಾಗಿ 1.6 ರೂ.ಮತ್ತು 40 ಪೈಸೆಗಳಷ್ಟು ಹೆಚ್ಚಿಸಿದೆ.

ಬ್ರಾಂಡ್ ರಹಿತ ಅಥವಾ ಸಾಮಾನ್ಯ ಪೆಟ್ರೋಲ್ ಮೇಲಿನ ಮೂಲ ಅಬಕಾರಿ ಸುಂಕವನ್ನು ಪ್ರತೀ ಲೀ.ಗೆ 5.46 ರೂ.ಗಳಿಂದ 7.06 ರೂ.ಗಳಿಗೆ ಹಾಗೂ ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕವನ್ನು ಪ್ರತೀ ಲೀ.ಗೆ 4.26 ರೂ.ಗಳಿಂದ 4.66 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯು ಶುಕ್ರವಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

Write A Comment