ಕರ್ನಾಟಕ

ತಮ್ಮನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ : ಸಚಿವ ಚಿಂಚನಸೂರ

Pinterest LinkedIn Tumblr

chinಬೆಂಗಳೂರು,ನ.7- ಯಾವುದೇ ಕಾರಣಕ್ಕೂ ತಮ್ಮನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನ ಸೂರ ಇಂದಿಲ್ಲಿ ತಿಳಿಸಿದರು. ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,

60 ಲಕ್ಷ ಜನರಿರುವ ಸಮುದಾಯ ಪ್ರತಿನಿಧಿಸುವ ಏಕೈಕ ನಾಯಕ ತಾವಾಗಿದ್ದು, ತಮ್ಮನ್ನು ಸಂಪುಟ ದಿಂದ ಕೈಬಿಡುತ್ತಾರೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು. ಮಂತ್ರಿಯಾಗಿ 5 ವರ್ಷ ಪೂರ್ಣಗೊಳ್ಳಿಸುವ ವಿಶ್ವಾಸವಿದೆ ಎಂದ ಅವರು, ತಮ್ಮ ಜನಾಂಗದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು. ತಮಗೆ ಮಕ್ಕಳಿಲ್ಲ, ಅಪ್ಪ-ಅಮ್ಮ ಇಲ್ಲ, ಜನಾಂಗದ ಸೇವೆಯೇ ನನ್ನ ಮುಂದಿರುವ ಗುರಿ ಎಂದರು.

ನೂತನ ಜವಳಿ ನೀತಿ ಜಾರಿಗೆ ಬಂದ ಮೇಲೆ 10 ಸಾವಿರ ಕೋಟಿ ರೂ. ಬಂಡವಾಳ ಅನುದಾನಿಸಲು ಉದ್ದೇಶಿಸಲಾಗಿದೆ. ಯಾದಗಿರಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್ ನಿರ್ಮಿಸಲಾಗುತ್ತಿದೆ. ಈಗಾಗಲೇ ಜವಳಿ ನೀತಿ ಅನ್ವಯ 1883 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, 77 ಸಾವಿರ ಉದ್ಯೋಗ ಸೃಷ್ಟಿಯಾಗಿದೆ ಎಂದರು.

ಚಾಮರಾಜನಗರ, ಶಿರಾ, ಬಳ್ಳಾರಿಗಳಲ್ಲಿ ತಲಾ 500 ಎಕರೆ  ಪ್ರದೇಶದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಉದ್ದೇಶಿಸಿದ್ದು, ಕೈಎಡಿಬಿ ಮೂಲಕ ಹೂಡಿಕೆದಾರರಿಗೆ ಜಮೀನು ಹಂಚಿಕೆ ಮಾಡಲಾಗುವುದು. ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದಿವೆ. ತಮಿಳುನಾಡಿನ ಮಾದರಿಯಲ್ಲಿ ವಸ್ತ್ರಭಾಗ್ಯ ಜಾರಿಗೆ ತರುವ ಸಾಧಕ-ಬಾಧಕ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರೊದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಚಿಂಚನಸೂರ ತಿಳಿಸಿದರು.

Write A Comment