ಬೆಂಗಳೂರು : ಮಾಜಿ ಸಂಸದೆ ,ನಟಿ ರಮ್ಯಾ ಅವರು ಸೋಮವಾರ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನುಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ ಮಾತುಕತೆ ಮುಗಿಸಿ ಹೊರಬರುವ ವೇಳೆ ರಮ್ಯಾ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.
ಸದಾಶಿವ ನಗರದಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ಆಗಮಿಸಿದ ರಮ್ಯಾ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ಮಾತುಕತೆ ನಡೆಸಿ ಹೊರಬರುವ ವೇಳೆ ಕಣ್ಣಂಚಲ್ಲಿ ನೀರು ತುಂಬಿ ಕೊಂಡಿದ್ದ ರಮ್ಯಾ ಭಾವುಕರಾಗಿದ್ದರು.
ಈ ವೇಳೆ ಸುದ್ದಿಗಾರರು ಯಾವ ವಿಚಾರಕ್ಕಾಗಿ ಭೇಟಿ ನೀಡಿದ್ದೀರಿ ಎಂದು ಕೇಳಿದಕ್ಕೆಉತ್ತರಿಸಿ ದ ರಮ್ಯಾ ನಾನು ಅವರನ್ನು ವಿಚಾರಿಸಲು ಮಾತ್ರ ಭೇಟಿ ನೀಡಿದ್ದು,ಇದು ಸೌಜನ್ಯಕ್ಕಾಗಿ ಮಾತ್ರ ಎಂದರು.
ನಾನು ಎಂಎಲ್ಸಿ, ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆಂತಹ ಯಾವುದೇ ಲಾಭಿಗಾಗಿ ಇಲ್ಲಿ ಬಂದಿಲ್ಲ ಎಂದು ರಮ್ಯಾ ಸ್ಪಷ್ಟನೆ ನೀಡಿದರು.
ಚೆಕ್ ವಿವಾದಕ್ಕೆ ಸಂಬಂಧಿಸಿ ಸುದ್ದಿಗಾರರು ಕೇಳಿದಾಗ ನಾನು ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಪಷ್ಟೀಕರಣ ನೀಡಿದ್ದೇನೆ ಎಂದರು.
-ಉದಯವಾಣಿ