ಕರ್ನಾಟಕ

ಕ್ಯಾನ್ಸರ್ ವಿರುದ್ಧ ಹೋರಾಟ: ರಾಜ್ಯದ ಮೊದಲ ಹೆಜ್ಜೆ!

Pinterest LinkedIn Tumblr

cancer

ಪದ್ಮಪರ್ಣ ಘೋಷ್ ”ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು ಅದೊಂದು ಸಾಂಕ್ರಾಮಿಕ ರೋಗವೆಂದು ತೋರಿಸಿಕೊಟ್ಟಿವೆ. ಪ್ರತಿಯೊಂದು ಕುಟುಂಬದಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಬ್ಬರಾದರೂ ಕ್ಯಾನ್ಸರ್ ರೋಗಿಯನ್ನು ನೋಡಿದ್ದಾರೆ. ನಾವು ಭಾರತೀಯರು ಸಮಸ್ಯೆಯ ಕೇವಲ ಒಂದು ಕೊನೆಯನ್ನು ಮಾತ್ರ ನೋಡಿದ್ದೇವೆ. ಅದೆಂದರೆ, ಕ್ಯಾನ್ಸರ್ ಆಸ್ಪತ್ರೆಗಳನ್ನು ಕಟ್ಟುವುದು” ಎಂದು ಹೇಳುತ್ತಾರೆ ಬೆಂಗಳೂರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿಶಾಲ್ ರಾವ್.

ನಾವು ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಲು ಯತ್ನಿಸುವುದಿಲ್ಲ ಏಕೆ ಎಂಬುದೇ ಅವರ ಮೂಲ ಪ್ರಶ್ನೆ. ಇದನ್ನು ಮಾಡಬೇಕಾದರೆ ವೈದ್ಯರಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಮೂಲಭೂತ ಸ್ವರೂಪ ಗೊತ್ತಾಗಬೇಕಾಗಿದೆ. ಅದೆಂದರೆ, ಎಲ್ಲೆಲ್ಲ ಕ್ಯಾನ್ಸರ್ ವ್ಯಾಪಕವಾಗಿದೆ, ಕ್ಯಾನ್ಸರ್ ಉಂಟುಮಾಡುವ ಹೊರೆಗಳೆಷ್ಟು, ಅದು ಯಾವ ರೀತಿಯ ಕ್ಯಾನ್ಸರ್? ಇವುಗಳಿಗೆ ಉತ್ತರಗಳು ನಮಗೆ ಎಷ್ಟು ಆಸ್ಪತ್ರೆಗಳು ಬೇಕು, ಕ್ಯಾನ್ಸರ್ ತಡೆಯ ಯೋಜನೆಗಳು, ಕ್ಯಾನ್ಸರ್ ಕುರಿತ ಸಂಶೋಧನೆ ಮತ್ತು ಚಿಕಿತ್ಸೆ ಯೋಜನೆಗಳನ್ನು ಹೇಗೆ ರೂಪಿಸಬೇಕು ಇತ್ಯಾದಿಗಳನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡಬಹುದು. ‘ಗ್ಲೋಬೋ ಕ್ಯಾನ್’ ಎಂಬ ಸ್ವಯಂಸೇವಾ ಸಂಸ್ಥೆಯ 2012ರ ವರದಿಯಂತೆ ಯಾವು ದೇ ಕ್ಷಣದಲ್ಲಿ ನೋಡಿದರೂ 28 ಲಕ್ಷ ಕ್ಯಾನ್ಸರ್ ರೋಗಿಗಳು ಭಾರತದಲ್ಲಿ ಇರುತ್ತಾರೆ. ಈ ವರದಿಯು ಹೇಳಿಕೊಳ್ಳುವಂತೆ ಪ್ರತೀ ವರ್ಷ 6.80 ಲಕ್ಷ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಾರೆ.

ದಕ್ಷಿಣ ಕನ್ನಡದಲ್ಲಿ ಗಂಟಲಿನ (ಥೈರಾಯ್ಡ್ದ) ಮತ್ತು ಉತ್ತರ ಭಾಗದಲ್ಲಿ ಕರುಳಿನ (ಎಸೋಫಿಜಿಯಲ್) ಕ್ಯಾನ್ಸರ್ ಪ್ರಕರಣಗಳು ಏಕೆ ಹೆಚ್ಚಾಗಿ ಕಂಡುಬರುತ್ತವೆ? ಈ ವಿನ್ಯಾಸಗಳನ್ನು ನಾವು ತಿಳಿದುಕೊಳ್ಳುವುದು ಅಗತ್ಯ. ಆದರೆ, ಹೇಗೆಂದು ನಮಗೆ ಗೊತ್ತಿಲ್ಲ. ಅಭ್ಯಾಸಗಳು, ಆಹಾರ ಪದ್ಧತಿಗಳು, ಪಾರಿಸರಿಕ ಪರಿಸ್ಥಿತಿ- ಕೀಟನಾಶಕ, ಮಾಲಿನ್ಯ ಇತ್ಯಾದಿಗಳು ಹೇಗೆ ಕಾರಣ ಎಂದು ನಾವು ತಿಳಿದುಕೊಳ್ಳಬೇಕಾಗಿದೆ. ಇದಕ್ಕಾಗಿ ಸದ್ಯಕ್ಕೆ ನಮ್ಮ ಕಾರ್ಯತಂತ್ರ ಶೂನ್ಯ. ಚಿಕಿತ್ಸೆ ಮತ್ತು ತಡೆಯನ್ನು ಯೋಜಿಸಲು ನಮಗೆ ಇವು ಗೊತ್ತಾಗಿರುಬೇಕಾದುದು ಅಗತ್ಯವಲ್ಲವೆ? ಎಂದು ರಾವ್ ಕೇಳುತ್ತಾರೆ.

ಕ್ಯಾನ್ಸರ್‌ನ ವಿನ್ಯಾಸ-ನಕ್ಷೆಗಳನ್ನು ತಯಾರಿಸುವ ಅಗತ್ಯ ಮತ್ತು ಕ್ಯಾನ್ಸರ್ ಪ್ರಕರಣಗಳನ್ನು ವರದಿ ಮಾಡಬೇಕಾದ ಅಗತ್ಯದ ಕುರಿತು ಭಾರತವೀಗ ಸ್ವಲ್ಪಸ್ವಲ್ಪವಾಗಿ ಎಚ್ಚೆತ್ತುಕೊಳ್ಳುತ್ತಿದೆ. ದೇಶಕ್ಕೆ ಮಾದರಿ ಡಾ॥ ಈ ವರ್ಗೀಕರಣ (ವರದಿ ಮಾಡಬೇಕಾದ ರೋಗಗಳು) ಬ್ರಿಟಿಶ್ ಕಾಲದಲ್ಲಿ ಆರಂಭವಾಗಿತ್ತು. ಕಾಲರಾ, ಸಿಡುಬು ಮುಂತಾದ ರೋಗಗಳು ಕಂಡುಬಂದರೆ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರು ಸರಕಾರಕ್ಕೆ ವರದಿ ಮಾಡಬೇಕಾಗಿತ್ತು. ಕ್ಯಾನ್ಸರ್ ಪ್ರಕರಣಗಳನ್ನು ಕೂಡಾ ವ್ಯವಸ್ಥಿತವಾಗಿ ವರದಿ ಮಾಡಬೇಕಾದ ಅಗತ್ಯವನ್ನು ನಮ್ಮಲ್ಲಿ ಹಲವರು ಹೇಳುತ್ತಾಬಂದಿದ್ದೇವೆ ಎಂದು ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸಂಸ್ಥೆ (ಐಪಿಎಚ್)ಯ ಬೋಧಕ ಪ್ರಶಾಂತ್ ಪಿ.ಎಸ್. ಹೇಳುತ್ತಾರೆ.

ನಮ್ಮ ಈಗಿನ ಅಗತ್ಯವೆಂದರೆ, ದೇಶದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿರುವ ಕ್ಯಾನ್ಸರ್ ಲೆಕ್ಕಾಚಾರಗಳಲ್ಲ; ಬದಲಾಗಿ ದೊಡ್ಡ ಪ್ರಮಾಣದ ಭೌಗೋಳಿಕತೆಯ ಆಧಾರದ ಕ್ಯಾನ್ಸರ್ ದಾಖಲಾತಿಗಳು ಎಂದು ಪ್ರಶಾಂತ್ ಹೇಳುತ್ತಾರೆ. ಸದ್ಯಕ್ಕೆ ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟ್ರಿ ಕಾರ್ಯಕ್ರಮದಲ್ಲಿ 29 ಜನಸಂಖ್ಯಾ ಆಧರಿತ ಕ್ಯಾನ್ಸರ್ ರಿಜಿಸ್ಟ್ರಿ (ಪಿಬಿಸಿಆರ್)ಗಳು ಕಾರ್ಯನಿರ್ವಹಿಸುತ್ತಿದ್ದು, ಅವೆಲ್ಲವೂ ನಗರ ಪ್ರದೇಶಗಳಲ್ಲಿವೆ. ಅವು ನಮ್ಮ ಜನಸಂಖ್ಯೆಯ ಕೇವಲ ಎಂಟು ಶೇ.ವನ್ನು ಮಾತ್ರ ಒಳಗೊಳ್ಳುತ್ತವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) 2011ರ ತನ್ನ ವರದಿಯಲ್ಲಿ ಈಶಾನ್ಯ ರಾಜ್ಯಗಳಾದ ಮೇಘಾಲಯದ ಖಾಸಿ ಹಿಲ್ಸ್, ಮಿಜೋರಾಂನ ಐಜ್ವಾಲ್ ಮತ್ತು ಅಸ್ಸಾಂನ ಪಶ್ಚಿಮ ಕಾಮರೂಪದಲ್ಲಿ ಹೊಸದಾಗಿ ಸ್ಥಾಪಿಸಲಾದ ಬಿಬಿಸಿ ಆರ್‌ಗಳ ದತ್ತಾಂಶಗಳನ್ನು ಸೇರಿಸಿಕೊಂಡಿತು. ಅದರ ಪ್ರಕಾರ ಅಲ್ಲಿ ಮೇಲ್ಭ್ಬಾಗದ ಪಚನ ಮತ್ತು ಶ್ವಾಸ ನಾಳಗಳ (ಮುಖ್ಯವಾಗಿ ಓಸೋಪೇಗಸ್, ಹೈಪೋಪೇರಿನ್ಕ್ಸ್ ಮತ್ತು ಲ್ಯಾರಿನ್ಕ್ಸ್) ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿತ್ತು. ಕರ್ನಾಟಕವು ಕ್ಯಾನ್ಸರ್ ಅಧಿಸೂಚನೆಯನ್ನು ಕಡ್ಡಾಯ ಮಾಡಿದ ದೇಶದ ನಾಲ್ಕನೆ ರಾಜ್ಯವಾಗಿದ್ದು, ತ್ರಿಪುರಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳು ಮೊದಲೇ ಇದನ್ನು ಮಾಡಿವೆ. ಆದರೆ, ಕೇಂದ್ರ ಸರಕಾರವು ಇದನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಯೋಜನೆಯನ್ನು ಕಡ್ಡಾಯಗೊಳಿಸಲು ಒಂದು ಹಾದಿಯನ್ನು ಹುಡುಕಿದವರೆಂದರೆ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿಯವರು. ಇದ್ದ ಸಮಸ್ಯೆಯೆಂದರೆ, ಕ್ಯಾನ್ಸರನ್ನು ಅಧಿಸೂಚಿತಗೊಳಿಸಲು ರಾಷ್ಟ್ರಮಟ್ಟದಲ್ಲಿ ಯಾವುದೇ ಕಾನೂನು ಇಲ್ಲದಿರುವುದು. ತಿವಾರಿಯವರು ಎಲ್ಲಾ ಖಾಸಗಿ, ಸಾರ್ವಜನಿಕ ರಂಗದ ಆಸ್ಪತ್ರೆಗಳು ಮತ್ತು ಔಷಧಾಲಯಗಳನ್ನು ರಾಜ್ಯ ಸರಕಾರದ ಆದೇಶದ ಮೂಲಕ ಈ ಯೋಜನೆಯ ಅಡಿಗೆ ತರಲು ಕ್ರಮಕೈಗೊಂಡರು. ”ಎಲ್ಲ ವೈದ್ಯಕೀಯ ಸಂಸ್ಥೆಗಳು ಕ್ಯಾನ್ಸರ್ ಪ್ರಕರಣಗಳನ್ನು ವರದಿ ಮಾಡುವುದು ನಮಗೆ ಬೇಕಾಗಿತ್ತು. ಆದರೆ, ಇದನ್ನು ಮಾಡಲು ಯಾವುದೇ ಕಾಯ್ದೆ ಅಥವಾ ನಿಯಮಗಳನ್ನು ಹುಡುಕಲು ನಮಗೆ ಸಾಧ್ಯವಾಗಲಿಲ್ಲ. ಕೊನೆಗೆ 1976ರ ಮಹಾನಗರ ಪಾಲಿಕೆಗಳ ಕಾಯ್ದೆಯಲ್ಲಿ ಒಂದು ಹಾದಿಯನ್ನು ಕಂಡುಹಿಡಿದೆವು” ಎಂದು ಕ್ಯಾನ್ಸರ್‌ನಿಂದಾಗಿ ತನ್ನ ಮೂವರು ಹತ್ತಿರದ ಸಂಬಂಧಿಗಳನ್ನು ಕಳೆದುಕೊಂಡಿರುವ ತಿವಾರಿ ಹೇಳುತ್ತಾರೆ.

”ಸಮಸ್ಯೆ ಎಷ್ಟು ದೊಡ್ಡದಾಗಿದೆ ಎಂದು ತಿಳಿದುಕೊಳ್ಳಲು ನಾವು ನಿಖರವಾದ ದತ್ತಾಂಶಗಳನ್ನು ಹೊಂದಿರಬೇಕಾಗುತ್ತದೆ. ಇಲ್ಲವಾದರೆ, ಎಲ್ಲವೂ ಒಂದು ಅಂದಾಜಾಗಿಬಿಡುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷ ಸುಮಾರು 50,000 ಹೊಸ ಕ್ಯಾನ್ಸರ್ ಪ್ರಕರಣಗಳನ್ನು ನಾವು ನೋಡುತ್ತೇವೆ. ಆದರೆ, ರಾಜ್ಯದಲ್ಲಿ ಪ್ರತಿವರ್ಷ 1.5 ಲಕ್ಷ ಕ್ಯಾನ್ಸರ್ ಪ್ರಕರಣಗಳಿರುತ್ತವೆ” ಎಂದವರು ವಿವರಿಸುತ್ತಾರೆ.

ಕರ್ನಾಟಕದ ಬಳಿ ಸ್ಪಷ್ಟವಾದ ಅನುಷ್ಠಾನ ಯೋಜನೆಯಿದೆ. ಈ ವಿವರವಾದ ಯೋಜನೆಯನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು. ಬೇರೆ ಅಧಿಸೂಚನಾ ಯೋಜನೆಗಳ ಹಿಂದೆ ಯಾವುದೇ ಸೂಕ್ತವಾದ ಅನುಷ್ಠಾನ ಕಾರ್ಯತಂತ್ರಗಳಿಲ್ಲ ಎಂದು ಕರ್ನಾಟಕ ರಾಜ್ಯದಲ್ಲಿ ತಂಬಾಕು ನಿಯಂತ್ರಣ ಕುರಿತ ಉನ್ನತಾಧಿಕಾರ ಸಮಿತಿಯ ಸದಸ್ಯರೂ ಆಗಿರುವ ಡಾ. ರಾವ್ ಹೇಳುತ್ತಾರೆ.

ಅಮೃತಸರದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಪ್ರಹ್ಲಾದ್ ದುಗ್ಗಲ್ ಅವರು ಕೂಡ ಇದೇ ಅಭಿಪ್ರಾಯವನ್ನು ಪ್ರತಿಧ್ವನಿಸುತ್ತಾರೆ. ನಮ್ಮಲ್ಲಿ ವಾಸ್ತವಿಕವಾಗಿ ಏನೂ ಆಗಿಲ್ಲ. (ಪಂಜಾಬ್ 2012ರಲ್ಲಿ ಕ್ಯಾನ್ಸರನ್ನು ಅಧಿಸೂಚಿತಗೊಳಿಸಿತ್ತು) ಎಲ್ಲಾ ವೈದ್ಯರು ಕ್ಯಾನ್ಸರ್ ಪ್ರಕರಣಗಳನ್ನು ವರದಿ ಮಾಡಬೇಕು ಎಂದು ಸೂಚಿಸುವ ಕೆಲವು ಕಾಗದಗಳು ಮಾತ್ರ ಇವೆ ಎಂದವರು ಹೇಳುತ್ತಾರೆ. ಪಶ್ಚಿಮ ಬಂಗಾಳ ಪರಿಸ್ಥಿತಿಯೂ ಇದೇ ಆಗಿದೆ. ರಾಜ್ಯವು 2010ರಲ್ಲೇ ಕ್ಯಾನ್ಸರನ್ನು ಅಧಿಸೂಚಿತಗೊಳಿಸಿದ್ದರೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿಯ ಪ್ರಕಾರ ಅದರ ಕಾರ್ಯಾಚರಣೆ ನಿರೀಕ್ಷಿಸಿದ ಮಟ್ಟದಲ್ಲಿಲ್ಲ. ಕೋಲ್ಕತ್ತಾದಲ್ಲಿರುವ ಪಿಬಿಸಿಆರ್ ಮಾತ್ರ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಕ್ಯಾನ್ಸರ್ ರಿಜಿಸ್ಟ್ರಿಯಾಗಿದೆ.

ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸುವ ಕರ್ನಾಟಕದ ಯೋಜನೆಯು ಗ್ರಾಮ ಮಟ್ಟವನ್ನು ಮುಟ್ಟುತ್ತದೆ. ಯಾವುದೇ ವ್ಯಕ್ತಿ ಅಸಹಜ ಬೆಳವಣಿಗೆಯನ್ನು ಹೊಂದಿದ್ದರೆ, ಅಂಗನವಾಡಿ ಕಾರ್ಯಕರ್ತರಲ್ಲಿಗೆ ಹೋಗಬೇಕು. ಅವರು ಆರೋಗ್ಯ ಉಪಕೇಂದ್ರಕ್ಕೆ ವರದಿ ಮಾಡುತ್ತಾರೆ. ಅಲ್ಲಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಲ್ಲಿಂದ ವೈದ್ಯರಲ್ಲಿಗೆ ವರದಿ ಹೋಗುತ್ತದೆ. ವೈದ್ಯರು ಪ್ರಕರಣವನ್ನು ಸರಕಾರಕ್ಕೆ ವರದಿ ಮಾಡುತ್ತಾರೆ. ಇದರಿಂದ ಈ ಯೋಜನೆಯ ವ್ಯಾಪಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಕ್ಯಾನ್ಸರನ್ನು ಅಧಿಸೂಚಿತಗೊಳಿಸಿದ ರಾಜ್ಯಗಳೊಂದಿಗೆ ನಾವು ಮಾತನಾಡಿದ್ದೇವೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾರೆ ಎಂದು ಡಾ. ರಾವ್ ವಿವರಿಸುತ್ತಾರೆ.

ಯೋಜನೆಯ ಅನುಷ್ಠಾನದ ಮೇಲುಸ್ತುವಾರಿಗಾಗಿ ರಾಜ್ಯವು ಒಂದು ಕ್ಯಾನ್ಸರ್ ನಿಯಂತ್ರಣ ಸಮಿತಿಯನ್ನು ರಚಿಸಲಿದೆ. ವರದಿಯಲ್ಲಿ ಯಾವುದೇ ಪ್ರಮಾದಗಳಿಗಾಗಿ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಈ ಸಮಿತಿಗೆ ಉತ್ತರದಾಯಿಗಳಾಗಿರುತ್ತವೆ ಮತ್ತು ದಂಡನಾ ಕ್ರಮಗಳಿಗೆ ಬಾಧ್ಯವಾಗಿರುತ್ತವೆ. ಈಗ ಕ್ಯಾನ್ಸರನ್ನು ಪತ್ತೆ ಹಚ್ಚಿ ವರದಿ ಮಾಡುವುದು ಎಲ್ಲಾ- ಅಂದರೆ ಆಯುರ್ವೇದಿಕ್, ಆಲೋಪತಿ, ಹೋಮಿಯೋಪತಿ ಮತ್ತು ಯುನಾನಿ ವೈದ್ಯರ ಜವಾಬ್ದಾರಿಯಾಗಿರುತ್ತದೆ. ಹೀಗಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ರಾವ್ ಹೇಳುತ್ತಾರೆ.

ಇದು ಕೇವಲ ಮಾಹಿತಿ ಸಂಗ್ರಹದ ವಿಷಯವಾಯಿತು. ಸಂಗ್ರಹವಾಗುವ ಅಗಾಧ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ವಿಶ್ಲೇಷಿಸುತ್ತದೆ. (ಅದು ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡುವ ಜವಾಬ್ದಾರಿಯನ್ನೂ ಹೊಂದಿದೆ.) ರಾಷ್ಟ್ರೀಯ ಮಾಹಿತಿಶಾಸ್ತ್ರ ಕೇಂದ್ರ (ಎನ್‌ಐಸಿ) ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಈ ಕಾರ್ಯದಲ್ಲಿ ನೆರವಾ ಗಲಿವೆ. ಇದಕ್ಕೆ ಬೇಕಾದ ಸಾಫ್ಟ್‌ವೇರ್ ಅಭಿವೃದ್ಧಿ ಕಾರ್ಯವನ್ನು ಸದ್ಯಕ್ಕೆ ಎನ್‌ಐಸಿ ಮಾಡುತ್ತಿದೆ. ಈ ಕಾರ್ಯದ ಅಗಾಧತೆ ಮತ್ತು ಪ್ರತಿಯೊಂದು ಮೂಲೆ ಮೂಲೆಯ ಔಷಧಾಲಯಗಳನ್ನು ತಲುಪುವುದು ಕಷ್ಟ ಮತ್ತು ಇದಕ್ಕೆ ತರಬೇತಿಯ ಅಗತ್ಯವಿದೆ ಎಂಬುದನ್ನು ತಿವಾರಿ ಹಾಗೂ ಡಾ॥
ದತ್ತಾಂಶಗಳ ಸಂಗ್ರಹ ಬಹುಶಃ ಸುಲಭದ ಕೆಲಸ. ತಂಬಾಕು ನಿಯಂತ್ರಣ ನಿಜವಾಗಿಯೂ ಕಷ್ಟದ ಕೆಲಸ. ಇದಕ್ಕಾಗಿ ಸಾಮಾಜಿಕ ಬದಲಾವಣೆಯ ಅಗತ್ಯವಿದೆ. ಆದರೆ ಇದು ತಂಬಾಕು ನಿಯಂತ್ರಣದಲ್ಲಿ ನಮ್ಮ ಕೆಲಸಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ಆಶಾವಾದವಿದೆ ಎಂದು ತಿವಾರಿ ಹೇಳುತ್ತಾರೆ.

Write A Comment