ಕರ್ನಾಟಕ

ಮಂಡ್ಯದಲ್ಲಿ ಪ್ರಿಯಕರನ ಜೊತೆ ಬೆಟ್ಟಕ್ಕೆ ಹೋದ ಕಾಲೇಜು ವಿದ್ಯಾರ್ಥಿನಿ ಮೇಲೆ ನಾಲ್ವರಿಂದ ಗ್ಯಾಂಗ್‍ರೇಪ್

Pinterest LinkedIn Tumblr

7050gang_rape

ಮಂಡ್ಯ: ಬೆಂಗಳೂರಿನ ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿನ ಮೇಲೆ ನಡೆದ ಗ್ಯಾಂಗ್ ರೇಪ್ ಘಟನೆ ಮಾಸುವ ಮುನ್ನವೇ ಮಂಡ್ಯದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಾಲ್ವರು ಯುವಕರು ಗ್ಯಾಂಗ್ ರೇಪ್ ನಡೆಸಿದ್ದಾರೆ.

ನಿನ್ನೆ ಯುವತಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಆಧಾರದಲ್ಲಿ ಮೈಸೂರು ಕೆಆರ್ ಮಿಲ್‍ನ ಕೀರ್ತಿಗೌಡ, ಕಿರಣ್ ಗೌಡ, ಮೋಹನ್, ಮಂಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಬಳಿಯ ನಿರ್ಜನ ಪ್ರದೇಶದಲ್ಲಿ ಅಕ್ಟೋಬರ್ 9ರಂದು ಪ್ರಿಯಕರನ ಜೊತೆ ಯುವತಿ ಬೆಟ್ಟಕ್ಕೆ ಬಂದಿದ್ದ ವೇಳೆ ಈ ಗ್ಯಾಂಗ್ ರೇಪ್ ನಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯುವತಿ ಮೈಸೂರು ಮೂಲದವಳಾಗಿದ್ದು, ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದಾಳೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

Write A Comment